ಚಿಕ್ಕಮಗಳೂರು | ಪತ್ನಿಯನ್ನು ಕೊಚ್ಚಿ ಬರ್ಬರ ಹತ್ಯೆ ಮಾಡಿದ ಪತಿ - Mahanayaka
4:04 PM Thursday 16 - October 2025

ಚಿಕ್ಕಮಗಳೂರು | ಪತ್ನಿಯನ್ನು ಕೊಚ್ಚಿ ಬರ್ಬರ ಹತ್ಯೆ ಮಾಡಿದ ಪತಿ

thanu
16/10/2025

ಚಿಕ್ಕಮಗಳೂರು: ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೇ ಪತ್ನಿಯನ್ನು  ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ನಡೆದಿದೆ.


Provided by

ತನು (25) ಗಂಡನಿಂದ ಭೀಕರವಾಗಿ ಕೊಲೆಯಾದ ಮಹಿಳೆಯಾಗಿದ್ದಾರೆ. ಇವರು 7 ವರ್ಷದ ಹಿಂದೆ ಮದುವೆಯಾಗಿದ್ದು ರಮೇಶ್ ಎಂಬಾತನ ಜೊತೆಗೆ ವಿವಾಹವಾಗಿದ್ದರು.  ಇವರಿಬ್ಬರಿಗೆ 6 ವರ್ಷದ ಗಂಡು ಮಗುವಿದೆ.

ಗಂಡನ ಜೊತೆ ಜಗಳವಾಗಿ 2 ವರ್ಷದಿಂದ ಪ್ರತ್ಯೇಕವಾಗಿ ತನು ವಾಸವಿದ್ದರು ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ಕುಡಿದು ಬಂದ ರಮೇಶ್ ಪತ್ನಿಯನ್ನು ಕ್ರೂರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಮನೆಯ ರೂಮ್ ನಲ್ಲಿ ಪತ್ನಿಯನ್ನು ಬರ್ಬವಾಗಿ ಹತ್ಯೆ ಮಾಡಿದ್ದು, ರೂಮ್ ರಕ್ತದಿಂದ ನೆಂದು ಹೋಗಿರುವ ದೃಶ್ಯ ಭೀಕರವಾಗಿ ಕಂಡು ಬಂದಿದೆ.  ಘಟನೆಗೆ ಸಂಬಂಧಿಸಿದಂತೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ