ಚಿಕ್ಕಮಗಳೂರು | ಕರ್ತವ್ಯದಲ್ಲಿದ್ದಾಗಲೇ ಕಾಫಿನಾಡ ಯೋಧ ಸಾವು - Mahanayaka
10:26 AM Thursday 11 - December 2025

ಚಿಕ್ಕಮಗಳೂರು | ಕರ್ತವ್ಯದಲ್ಲಿದ್ದಾಗಲೇ ಕಾಫಿನಾಡ ಯೋಧ ಸಾವು

11/12/2025

ಚಿಕ್ಕಮಗಳೂರು:  ಕಾಫಿನಾಡ ಯೋಧರೊಬ್ಬರು ಕರ್ತವ್ಯದಲ್ಲಿದ್ದಾಗಲೇ  ರಾಜಸ್ಥಾನದ ಬಿಕಾನೇರ್ ನಲ್ಲಿ ಸಾವನ್ನಪ್ಪಿರುವ ಘಟನೆ  ನಡೆದಿದೆ.

ಕಡೂರಿನ ಯೋಧ ಗಿರೀಶ್ (37) ಮೃತಪಟ್ಟವರಾಗಿದ್ದಾರೆ. ಇವರು ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರಿಗೆ ವಾಂತಿಯಾಗಿದೆ. ಹೀಗಾಗಿ ವಿಶ್ರಾಂತಿ ಮಾಡಲು ತೆರಳಿದ್ದರು.

ನಂತರ ತಮ್ಮ ಮನೆಯವರಿಗೆ ವಿಡಿಯೋ ಕರೆ ಮಾಡಿ ವಿಚಾರ ತಿಳಿಸಿದ್ದು, ತಾನು ಆರೋಗ್ಯವಾಗಿದ್ದೇನೆ, ನಾಳೆ ಆಸ್ಪತ್ರೆಗೆ ಹೋಗ್ತೀನಿ ಅಂತ ಹೇಳಿದ್ದರು ಎನ್ನಲಾಗಿದೆ. ಆದ್ರೆ ನಂತರ ಗಿರೀಶ್ ಸಾವನ್ನಪ್ಪಿದ್ದಾರೆ ಅಂತ ಕುಟುಂಬಸ್ಥರಿಗೆ ಸೇನೆ ಮಾಹಿತಿ ನೀಡಿದ್ದಾರೆ.

ಯೋಧ ಗಿರೀಶ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಗಿರೀಶ್ 15 ದಿನಗಳ ಹಿಂದಷ್ಟೆ ಊರಿಂದ ಸೇನೆಗೆ ತೆರಳಿದ್ದರು.  ಕಳೆದ 18 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ