ವಿದ್ಯಾರ್ಥಿಗಳಿಗೆ ವಿಷ ಹಾಕಿ ಗಂಜಿ ಕೊಟ್ಟ ಶಿಕ್ಷಕಿ: ಗಂಡನಿಗೂ ವಿಷ ಕೊಟ್ಟಿದ್ದ ಕ್ರೂರಿ ಟೀಚರ್ ಗೆ ಮರಣದಂಡನೆ..! - Mahanayaka
10:45 AM Friday 19 - December 2025

ವಿದ್ಯಾರ್ಥಿಗಳಿಗೆ ವಿಷ ಹಾಕಿ ಗಂಜಿ ಕೊಟ್ಟ ಶಿಕ್ಷಕಿ: ಗಂಡನಿಗೂ ವಿಷ ಕೊಟ್ಟಿದ್ದ ಕ್ರೂರಿ ಟೀಚರ್ ಗೆ ಮರಣದಂಡನೆ..!

14/07/2023

ಶಿಕ್ಷಕಿಯೇ 25 ನರ್ಸರಿ ಮಕ್ಕಳಿಗೆ ಗಂಜಿಯಲ್ಲಿ ವಿಷ ಹಾಕಿ ತಿನ್ನಿಸಿ ಒಂದು ಮಗುವ‌ನ್ನು ಕೊಂದ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಹೆನಾನ್ ಪ್ರಾಂತ್ಯದಲ್ಲಿ ವಾಂಗ್(40) ಎಂಬ ಶಿಕ್ಷಕಿ 2019 ರಲ್ಲಿ ಈ ಪೈಶಾಚಿಕ ಕೃತ್ಯ ನಡೆಸಿದ್ದಳು. ಮೆಂಗ್ ಮೆಂಗ್ ಪ್ರೀಸ್ಕೂಲ್ ನಲ್ಲಿ ಕೆಲಸ ಮಾಡುತ್ತಿದ್ದ ವಾಂಗ್, ಮಕ್ಕಳಿಗೆ ನೀಡುವ ಗಂಜಿಯಲ್ಲಿ ಸೋಡಿಯಂ ನೈಟ್ರೇಟ್ ಎಂಬ ವಿಷವನ್ನು ಬೆರೆಸುತ್ತಿದ್ದ ಸಂಗತಿ ಸಹೋದ್ಯೋಗಿ ಒಬ್ಬರಿಂದ ಬಯಲಾಗಿತ್ತು.

ತಕ್ಷಣವೇ ಮಕ್ಕಳನ್ನು ಚಿಕಿತ್ಸೆಗೆ ಕರೆದೊಯ್ದಿದ್ದರಿಂದ ಎಲ್ಲಾ ಮಕ್ಕಳೂ ಚೇತರಿಸಿಕೊಂಡರೂ ಒಂದು ಮಗು ಮಾತ್ರ ಬಹು ಅಂಗಾಂಗ ವೈಫಲ್ಯದಿಂದ ಹತ್ತು ತಿಂಗಳು ನರಳಿ ಸಾವನ್ನಪ್ಪಿತ್ತು. ಈಕೆಗೆ ಈ ಮುನ್ನ 9 ತಿಂಗಳ ಕಾಲ ತಾತ್ಕಾಲಿಕ ಶಿಕ್ಷೆ ವಿಧಿಸಲಾಗಿದ್ದು, ಈಗ ಅದನ್ನು ಮರಣದಂಡನೆಯಾಗಿ ಪರಿವರ್ತಿಸಲಾಗಿದೆ.

ವಾಂಗ್ ಎರಡು ವರ್ಷಗಳ ಹಿಂದೆ ತನ್ನ ಗಂಡನಿಗೂ ಸಹ ಊಟದಲ್ಲಿ ವಿಷ ಹಾಕಿದ್ದಳು. ಆದರೆ ಆತ ಅನಾರೋಗ್ಯಕ್ಕೀಡಾದ ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮೃತ್ಯುವಿನ ದವಡೆಯಿಂದ ಪಾರಾಗಿದ್ದ. ಬಳಿಕ ವಾಂಗ್ ಆನ್ ಲೈನ್ ಮೂಲಕ ಸೋಡಿಯಂ ನೈಟ್ರೈಟ್ ತರಿಸಿಕೊಂಡು ವಿಷ ಹಾಕಿದ್ದಳು ಎಂದು ತಿಳಿದುಬಂದಿತ್ತು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ