ಚೀನಾದಲ್ಲಿ ಮಳೆರಾಯನ ಅಬ್ಬರ: ವರುಣನ ನರ್ತನಕ್ಕೆ 15 ಮಂದಿ ಬಲಿ - Mahanayaka
10:31 PM Thursday 21 - August 2025

ಚೀನಾದಲ್ಲಿ ಮಳೆರಾಯನ ಅಬ್ಬರ: ವರುಣನ ನರ್ತನಕ್ಕೆ 15 ಮಂದಿ ಬಲಿ

05/07/2023


Provided by

ಚೀನಾದಲ್ಲಿ ಮಳೆ ಅಬ್ಬರ ಜೋರಾಗಿದೆ. ಪರಿಣಾಮವಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವು ಮಂದಿ ಕಾಣೆಯಾಗಿದ್ದಾರೆ. ಚೀನಾ ವರುಣ ಆರ್ಭಟಕ್ಕೆ ತತ್ತರಿಸಿದೆ.

ನೈಋತ್ಯ ಚೀನಾದಲ್ಲಿ ಧಾರಾಕಾರ ಮಳೆಯಿಂದಾಗಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ನಾಪತ್ತೆಯಾಗಿದ್ದಾರೆ. ಸೋಮವಾರದಿಂದ ಈವರೆಗೆ ಸುರಿದ ಭಾರಿ ಮಳೆಗೆ 15 ಜನರು ಸಾವನ್ನಪ್ಪಿದ್ದಾರೆ ಮತ್ತು ನೈಋತ್ಯ ಚೀನಾದ ಚಾಂಗ್ಕಿಂಗ್ ಪುರಸಭೆಯಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಜ್ಯ ಸುದ್ದಿ ಸಂಸ್ಥೆ ಕ್ಸಿನ್ಹುವಾ ಹೇಳಿದೆ.

ಮಧ್ಯ ಮತ್ತು ನೈಋತ್ಯ ಚೀನಾ ದೊಡ್ಡ ಪ್ರದೇಶಗಳಾಗಿದ್ದು, ಇಲ್ಲಿ ಈಗಾಗಲೇ ಮಳೆಯಿಂದಾಗುವ ವಿಪತ್ತುಗಳ ಬಗ್ಗೆ ಅಧಿಕಾರಿಗಳು ಮಂಗಳವಾರ ಎಚ್ಚರಿಕೆಯನ್ನು ನೀಡಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎಲ್ಲಾ ಹಂತಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳೊಂದಿ ಸಭೆ ನಡೆಸಿದ್ದು, ಈಗಾಗಲೇ ಜನರ ಸುರಕ್ಷತೆ ಮತ್ತು ಆಸ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆದೇಶಿಸಿದ್ದಾರೆ.

ಪ್ರವಾಹದ ವಿರುದ್ಧ ಹೋರಾಡಲು ಅಧಿಕಾರಿಗಳು ಮುಂದಾಳತ್ವ ವಹಿಸಬೇಕು, ಜನರ ಸುರಕ್ಷತೆ ಮೊದಲ ಆದ್ಯತೆ ಮತ್ತು ಎಲ್ಲಾ ರೀತಿಯ ನಷ್ಟಗಳನ್ನು ಕಡಿಮೆ ಮಾಡಲು ಶ್ರಮಿಸಬೇಕು ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ ಎಂದು ರಾಜ್ಯದ ಸುದ್ದಿ ಸಂಸ್ಥೆಗಳು ಹೇಳಿದೆ.

ಸಿಚುವಾನ್‌ನಲ್ಲಿ ಈ ತಿಂಗಳು ಭಾರೀ ಮಳೆಯಿಂದ 460,000 ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ. ಮಳೆಯ ಪರಿಣಾಮದಿಂದ ಸುಮಾರು 85,000 ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ವಾರ ದೇಶದ ಕೆಲವು ಭಾಗಗಳಲ್ಲಿ ಸಂಭವನೀಯ ಮಣ್ಣಿನ ಕುಸಿತ ಮತ್ತು ಪರ್ವತ ಪ್ರದೇಶಗಳ ಕುಸಿತದಿಂದ ಅಪಾರ ಪ್ರಮಾಣದ ಹಾನಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ