ಚಿಂದಿ ಹಾಯುವವರ ಟೆಂಟ್ ಗೆ ದಾಳಿ ನಡೆಸಿದ ಕಾಡಾನೆ - Mahanayaka
1:40 PM Thursday 11 - September 2025

ಚಿಂದಿ ಹಾಯುವವರ ಟೆಂಟ್ ಗೆ ದಾಳಿ ನಡೆಸಿದ ಕಾಡಾನೆ

mudigere
26/12/2022

ಚಿಕ್ಕಮಗಳೂರು:  ನಿನ್ನೆಯಷ್ಟೇ ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ರೈತರೊಬ್ಬರನ್ನು ಕಾಡಾನೆ ಬಲಿಪಡೆದಿತ್ತು. ಇದೀಗ ಚಿಂದಿ ಹಾಯುವ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪಶು ಆಸ್ಪತ್ರೆ ಸಮೀಪ ನಡೆದಿದೆ.


Provided by

ಹಾಸನ ಜಿಲ್ಲೆಯ ಹಗರೇ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬುವರು ಚಿಂದಿ ಆರಿಸಲು ಬಂದಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಪಶು ಆಸ್ಪತ್ರೆ ಸಮೀಪ ಟೆಂಟ್ ಹಾಕಿಕೊಂಡು ಮಲಗಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ.

ಘಟನೆಯಲ್ಲಿ ನಾಗವಲ್ಲಿ ಎಂಬವರಿಗೆ ಸೊಂಟ ಹಾಗು ಎದೆ ಭಾಗಕ್ಕೆ ಪೆಟ್ಟಾಗಿದ್ದು ಗಂಡುಗುಸೆ ಎಂಬುವರಿಗೆ ಕಾಲಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಬಣಕಲ್ ನ ಸಾರ್ವಜನಿಕರು ಹಾಗೂ ಸಮಾಜಸೇವಕ ಆರಿಫ್ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಅರಣ್ಯ ರಕ್ಷಕ ಮೊಸಿನ್ ಉಪವಲಯನ್ಯಾಧಿಕಾರಿ ಉಮೇಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ