ಚಿನ್ನದ ಗಣಿಯಲ್ಲಿ ಸ್ಫೋಟ: 59 ಮಂದಿ ಸಾವು; ನೂರಕ್ಕೂ ಹೆಚ್ಚು ಮಂದಿಗೆ ಗಾಯ - Mahanayaka

ಚಿನ್ನದ ಗಣಿಯಲ್ಲಿ ಸ್ಫೋಟ: 59 ಮಂದಿ ಸಾವು; ನೂರಕ್ಕೂ ಹೆಚ್ಚು ಮಂದಿಗೆ ಗಾಯ

chinna1
22/02/2022


Provided by

ಬುರ್ಕಿನಾ ಫಾಸೊ: ಚಿನ್ನದ ಗಣಿಯಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ, ಸುಮಾರು 59 ಮಂದಿ ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುರ್ಕಿನಾ ಫಾಸೊ ರಾಷ್ಟ್ರದ ನೈರುತ್ಯ ಭಾಗದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಆರ್​ಟಿಬಿ ವರದಿಯಲ್ಲಿ ಗ್ಯಾಂಬ್ಲೋರಾ ಗ್ರಾಮದಲ್ಲಿ ಈ ನಡೆದಿದ್ದು, ಗಣಿ ಪ್ರದೇಶದಲ್ಲಿ ಚಿನ್ನವನ್ನು ಸಂಸ್ಕರಿಸಲು ಬಳಸಲಾದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದೆ.

ಸ್ಫೋಟ ಭಯಾನಕವಾಗಿತ್ತು. ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದಿದ್ದವು ಎಂದು ಸ್ಫೋಟದ ಸಮಯದಲ್ಲಿ ಸ್ಥಳದಲ್ಲಿದ್ದ ಅರಣ್ಯ ಸಂರಕ್ಷಣಾಧಿಕಾರಿ ಸಂಸನ್ ಕಂಬೌ ಅವರು ದೂರವಾಣಿ ಮೂಲಕ ಅಸೋಸಿಯೇಟೆಡ್ ಪ್ರೆಸ್‌ ಸ್ಪಷ್ಟನೆ ನೀಡಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಣಿಯಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, ಅದಾದ ನಂತರ ಕೆಲವೇ ನಿಮಿಷಗಳಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ ಎಂದು ಸಂಸನ್ ಕಂಬೌ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ: ಡಿಜಿಪಿ ಸ್ಪಷ್ಟನೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ

ಸಂಬಂಧಿಕರ ಮುಂದೆಯೇ ಸಿಪಿಎಂ ಕಾರ್ಯಕರ್ತನ ಭೀಕರ ಕೊಲೆ

ಮೃತ ಹರ್ಷನ ವಿರುದ್ದ ನಾಲ್ಕು ಪ್ರಕರಣ ದಾಖಲಾಗಿದ್ದವು

ಇತ್ತೀಚಿನ ಸುದ್ದಿ