ಕ್ರಿಸ್ಮಸ್ ಸಂದೇಶ: ಪ್ರೀತಿಯಿಂದ ಜೀವಿಸಿದಾಗ ನಮ್ಮ ಹೃದಯ ಗೋದಲಿಯಲ್ಲಿ ಯೇಸು ಜನಿಸುತ್ತಾರೆ | ಫಾ.ಮಾಥ್ಯೂ ವೆಲ್ಲಚಾಲಿಲ್ - Mahanayaka

ಕ್ರಿಸ್ಮಸ್ ಸಂದೇಶ: ಪ್ರೀತಿಯಿಂದ ಜೀವಿಸಿದಾಗ ನಮ್ಮ ಹೃದಯ ಗೋದಲಿಯಲ್ಲಿ ಯೇಸು ಜನಿಸುತ್ತಾರೆ | ಫಾ.ಮಾಥ್ಯೂ ವೆಲ್ಲಚಾಲಿಲ್

fr mathew vellachalil
24/12/2021


Provided by

ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಪ್ರೀತಿಪೂರ್ವಕವಾಗಿ ಕೋರುತ್ತೇನೆ.

ಕ್ರಿಸ್ಮಸ್ ನಮಗೆ ನೀಡುವ ಸಂದೇಶ ಹಲವು. ಆ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಅವುಗಳಿಗೆ ಅನುಸಾರವಾಗಿ ಜೀವಿಸುವಾಗ  ಮಾತ್ರ ನಮ್ಮ ಆಚರಣೆಗಳು ಸಫಲವಾಗುತ್ತದೆ. ಕ್ರಿಸ್ತನ ಜನನದ ಸಂದೇಶ ಮೊದಲು ಲಭಿಸಿದ್ದು ಹೊಲದಲ್ಲಿ ಕುರಿಮಂದೆಯನ್ನು ಕಾಯುತ್ತಿದ್ದ ಕುರುಬರಿಗೆ. ಕುರುಬರು ಸಾಧಾರಣ, ಸಾಮಾನ್ಯ ವರ್ಗಕ್ಕೆ ಸೇರಿದವರು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರು. ಆದರೆ, ಅವರು ಶಾಂತಿಯುತವಾಗಿ ಪ್ರೀತಿಯಿಂದ ಬಾಳುತ್ತಿದ್ದವರು.  ಮೊದಲು ಗೋದಲಿಯ ದರ್ಶನ ಸೌಭಾಗ್ಯ ಲಭಿಸಿದ್ದು ಅವರಿಗೆ,  ಲೋಕ ರಕ್ಷಕನನ್ನು ಆರಾಧಿಸಲು ಭಾಗ್ಯ ಮೊದಲು ಲಭಿಸಿದು ಅವರಿಗೆ.

ಕುರುಬರಂತೆ ಸಾಮಾನ್ಯವಾಗಿ ಬಾಳುವಾಗ, ಶಾಂತಿಯುತವಾಗಿ ಪ್ರೀತಿಯಿಂದ ಜೀವಿಸುವಾಗ ನಮ್ಮ ಹೃದಯದಲ್ಲಿ ಗೋದಲಿ ನಿರ್ಮಾಣವಾಗುತ್ತದೆ. ಅಲ್ಲಿ ಪ್ರಭು ಕ್ರಿಸ್ತರು ಜನಿಸುತ್ತಾರೆ. ಕ್ರಿಸ್ಮಸ್ ಶಾಂತಿಯ ಸಮಾಧಾನದ ಹಬ್ಬ. ಕ್ರಿಸ್ಮಸ್ ಲೋಕಕ್ಕೆ ನೀಡುವ ಸಂದೇಶ ಶಾಂತಿಯ ಸಂದೇಶ. ಇಂದು ನಮ್ಮ ಸುತ್ತ ಮುತ್ತ ಅಶಾಂತಿ, ಅಸಮಾಧಾನ ತಾಂಡವವಾಡುತ್ತಿದೆ. ಜಾತಿ ಮತ ಧರ್ಮ ರಾಜಕೀಯದ ಹೆಸರಲ್ಲಿ ಅಶಾಂತಿಯ ದೂರ್ಬೂತ ನಮ್ಮ ಸುತ್ತ ಆವರಿಸಿದೆ. ಇಂತಹ ಪರಿಸ್ಥಿಯಲ್ಲಿ ಕ್ರಿಸ್ಮಸ್ ಆಚರಿಸುವಾಗ ಈ ಸಮೂಹದಲ್ಲಿ ಶಾಂತಿಯ ವಾಹಕರಗಲು ನಮಗೆ ಸಾಧ್ಯವಾದರೆ ಮಾತ್ರ ನಮಗೆ ನಿಜವಾದ ಕ್ರೈಸ್ತರಗಲು ಸಾಧ್ಯ. ಕಾರಣ, ಯೇಸುವಿನ ಜನನದಿಂದ ಮರಣದ ತನಕ ಅವರು ತೋರಿಸಿಕೊಟ್ಟದು ಶಾಂತಿಯ ಸಮಾಧಾನದ ಮಾರ್ಗ ಮಾತ್ರ.

ಯೇಸುವಿನ ಜನನದ ವೇಳೆಯಲ್ಲಿ ದೇವದೂತರು ಹಾಡಿದ ಗೀತೆಯೂ  ಅದೇ ಆಗಿತ್ತು “ಮಹೋನ್ನತದಲಿ   ದೇವರಿಗೆ ಮಹಿಮೆ ಭೂಲೋಕದಲಿ ದೇವರೋಲಿದ ಮಾನವರಿಗೆ ಶಾಂತಿ ಸಮಾಧಾನ”. ಶಾಂತಿಯ ಸಮಾಧಾನದ ಕ್ರಿಸ್ಮಸ್ ಆಚರಿಸುವಾಗ ಶಾಂತಿಯ ವಾಹಕರಗಲು ನಮಗೆಲ್ಲರಿಗೂ ಸಾಧ್ಯವಾಗಲಿ.

ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

-ಫಾ.ಮಾಥ್ಯೂ ವೆಲ್ಲಚಾಲಿಲ್

ಬೆಳ್ತಂಗಡಿ ಧರ್ಮಪ್ರಾಂತ್ಯ

ಇತ್ತೀಚಿನ ಸುದ್ದಿ