ಬಿಹಾರದಲ್ಲಿ ಧಾರ್ಮಿಕ ಮೆರವಣಿಗೆ ವೇಳೆ ಘರ್ಷಣೆ: ಪೊಲೀಸರ ವಿರುದ್ಧವೇ ಸ್ಥಳೀಯರು ಗರಂ - Mahanayaka

ಬಿಹಾರದಲ್ಲಿ ಧಾರ್ಮಿಕ ಮೆರವಣಿಗೆ ವೇಳೆ ಘರ್ಷಣೆ: ಪೊಲೀಸರ ವಿರುದ್ಧವೇ ಸ್ಥಳೀಯರು ಗರಂ

23/08/2023


Provided by

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮಿರ್ಜಾಪುರ ಗ್ರಾಮದಲ್ಲಿ ಕೋಮು ಘರ್ಷಣೆ ನಡೆದಿದೆ. ಈ ಪ್ರದೇಶದಲ್ಲಿನ ಹಿಂಸಾತ್ಮಕ ಘಟನೆಗಳಿಗೆ ಪೊಲೀಸರ ನಿಷ್ಕ್ರಿಯತೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೂರ್ವ ಚಂಪಾರಣ್ಯದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಸೋಮವಾರ ಕೋಮು ಘರ್ಷಣೆಗಳು ಭುಗಿಲೆದ್ದಿತ್ತು. ಮೆಹಸಿ, ಕಲ್ಯಾಣಪುರ ಮತ್ತು ದರ್ಪಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಾಗರ ಪಂಚಮಿ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿದೆ.

ಕಲ್ಲು ತೂರಾಟದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಪೀಡಿತ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಘರ್ಷಣೆಯಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಅಂಗಡಿಗಳು ನಾಶವಾಗಿವೆ. ಇದೇ ವೇಳೆ ಸ್ಥಳೀಯರು ತಮ್ಮ ಭಯಾನಕ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಅಲ್ಲದೇ ಪೊಲೀಸರ ವಿಳಂಬ ಕ್ರಮ ಅಥವಾ ಸಂಪೂರ್ಣ ನಿಷ್ಕ್ರಿಯತೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದೇ ವೇಳೆ ಲೈಂಗಿಕ ತಜ್ಞೆ ಅಸ್ಘರಿ ಖತೂನ್ ಅವರು ಇಂಡಿಯಾ ಟುಡೇಗೆ ತಮ್ಮ ಅನುಭವವನ್ನು ವಿವರಿಸಿದ್ದಾರೆ. ನಾಗರಪಂಚಮಿ ಮೆರವಣಿಗೆ ಮಿರ್ಜಾಪುರವನ್ನು ತಲುಪಿದಾಗ ತಾನು ತನ್ನ ಅಂಗಡಿಯಲ್ಲಿದ್ದೆ. ಆಗ ಮೆರವಣಿಗೆಯಲ್ಲಿ ಭಾಗವಹಿಸಿದವರು, ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಸ್ಥಾಪಿಸಲಾದ ಧಾರ್ಮಿಕ ಧ್ವಜಗಳನ್ನು ಹರಿದುಹಾಕಿದ್ದಾರೆ ಎಂದು ಅಸ್ಘರಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ