12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಶಿಕ್ಷಕನ ವಿರುದ್ಧವೇ ದೌರ್ಜನ್ಯದ ಆರೋಪ - Mahanayaka
4:32 AM Tuesday 16 - December 2025

12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ: ಶಿಕ್ಷಕನ ವಿರುದ್ಧವೇ ದೌರ್ಜನ್ಯದ ಆರೋಪ

03/03/2025

ಒಡಿಶಾದ ಕೇಂದ್ರಪಾರಾ ಜಿಲ್ಲೆಯ ಪಟ್ಟಮುಂಡೈ ಕಾಲೇಜಿನ 12 ನೇ ತರಗತಿ ವಿದ್ಯಾರ್ಥಿನಿ ಫೆಬ್ರವರಿ 24 ರಂದು ಪರೀಕ್ಷೆಯ ಸಮಯದಲ್ಲಿ ನಡೆದ ಘಟನೆಯ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ‌ನಡೆದಿದೆ. ಪರೀಕ್ಷಾ ಮೇಲ್ವಿಚಾರಕರಿಂದ ಕಿರುಕುಳದ ಆರೋಪದ ನಂತರ ಈ ಪ್ರಕರಣವನ್ನು ಪೊಲೀಸ್ ತನಿಖೆ ಆರಂಭಿಸಲಾಗಿದೆ.

ವಿದ್ಯಾರ್ಥಿನಿಯ ತಾಯಿ ಸಲ್ಲಿಸಿದ ದೂರಿನ ಪ್ರಕಾರ, ಫೆಬ್ರವರಿ 19 ರಂದು ಬಾಲಕಿ ಪರೀಕ್ಷೆಗೆ ಹಾಜರಾಗುತ್ತಿದ್ದಾಗ ಮೇಲ್ವಿಚಾರಕನು ಪರಿಶೀಲನೆಗಾಗಿ ಸಾಮಾನ್ಯ ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅದೇ ದಿನ ಆಕೆ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಆದರೆ, ಆ ಸಮಯದಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ಐದು ದಿನಗಳ ನಂತರ, ಫೆಬ್ರವರಿ 24 ರಂದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.

ಆಕೆಯ ಸಾವಿನ ಸುಮಾರು ಒಂದು ವಾರದ ನಂತರ, ಮಾರ್ಚ್ 1 ರಂದು ಕುಟುಂಬವು ಪೊಲೀಸರನ್ನು ಸಂಪರ್ಕಿಸಿ ಈ ಘಟನೆ ಕುರಿತು ಹೇಳಿದ್ದಾರೆ. ಹೀಗಾಗಿ ಪಟ್ಟಮುಂಡೈ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ