ಬಣಕಲ್ ನಲ್ಲಿ ಯುವಕರಿಂದ ಸ್ವಚ್ಚತಾ ಕಾರ್ಯಕ್ರಮ: ಸ್ವಚ್ಚ ಪರಿಸರದಿಂದ ಉತ್ತಮ ಆರೋಗ್ಯ: ರವಿ ಪೂಜಾರಿ - Mahanayaka
11:39 AM Saturday 31 - January 2026

ಬಣಕಲ್ ನಲ್ಲಿ ಯುವಕರಿಂದ ಸ್ವಚ್ಚತಾ ಕಾರ್ಯಕ್ರಮ: ಸ್ವಚ್ಚ ಪರಿಸರದಿಂದ ಉತ್ತಮ ಆರೋಗ್ಯ: ರವಿ ಪೂಜಾರಿ

banakkal
16/08/2024

ಕೊಟ್ಟಿಗೆಹಾರ: ನಾವು ನಮ್ಮ ಪರಿಸರದ ಸ್ವಚ್ಚತೆ ಕಾಪಾಡಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ  ಎಂದು ಮಲೆನಾಡು ಗ್ಯಾರೇಜ್ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ರವಿ ಪೂಜಾರಿ ಹೇಳಿದರು.

ಬಣಕಲ್ ಪೇಟೆಯಲ್ಲಿ ಮಲೆನಾಡು ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.ಗ್ರಾಮಗಳು ಸ್ವಚ್ಛವಾದರೆ ದೇಶವೇ ಸ್ವಚ್ಚವಾದಂತೆ. ಆದ್ದರಿಂದ ನಾಗರಿಕರಾದ ನಾವು ನಮ್ಮ ಪರಿಸರವನ್ನು ಸ್ವಚ್ಚವಾಗಿ ಇಡಬೇಕುಎಂದರು.

ಬಣಕಲ್ ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಚ ಮಾಡುವ ಮೂಲಕ ಶ್ರಮದಾನ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ  ಇಮ್ದಾದ್,ಕಾರ್ಯದರ್ಶಿ ಈಶ್ವರ್,ಖಜಾಂಚಿ ಇಮ್ರಾನ್,ಮತ್ತು ಸರ್ವ ಸದಸ್ಯರು ಇದ್ದರು.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

ಇತ್ತೀಚಿನ ಸುದ್ದಿ