ಮೊನ್ನೆಯಷ್ಟೇ ಸಿಎಂಗೆ ಡಿಚ್ಚಿ ಹೊಡೆದಿದ್ದ ಸಚಿವ ಈಶ್ವರಪ್ಪ ಇಂದು ಮಾಡಿದ್ದೇನು ಗೊತ್ತಾ? - Mahanayaka

ಮೊನ್ನೆಯಷ್ಟೇ ಸಿಎಂಗೆ ಡಿಚ್ಚಿ ಹೊಡೆದಿದ್ದ ಸಚಿವ ಈಶ್ವರಪ್ಪ ಇಂದು ಮಾಡಿದ್ದೇನು ಗೊತ್ತಾ?

yediyurappa eshwarappa
05/04/2021


Provided by

ದಾವಣಗೆರೆ: ಮೊನ್ನೆಯಷ್ಟೇ ಯಡಿಯೂರಪ್ಪ ವಿರುದ್ಧ ದೂರು ನೀಡಿ ಸುದ್ದಿಯಾಗಿದ್ದ ಕೆ.ಎಸ್.ಈಶ್ವರಪ್ಪನವರು ಇಂದು  ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪರನ್ನು ಹಿಗ್ಗಾಮುಗ್ಗಾ ಹೊಗಳಿದ್ದಾರೆ.

 ಕಾಗಿನೆಲೆ ಕನಕಪೀಠದ ಹರಿಹರ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಕಣ್ಮಣಿಯಾಗಿದ್ದಾರೆ, ಕನಕದಾಸ ಜಯಂತಿಗೆ ರಜೆ ನೀಡಿದ್ದು ಯಡಿಯೂರಪ್ಪ, ಈ ಕಾರ್ಯವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.

ಬಿಎಸ್‍ವೈ ನೇತೃತ್ವದಲ್ಲಿ ರಾಜ್ಯದಲ್ಲಿ ಮೀಸಲಾತಿಯನ್ನು ಶೇ. 50ಗಿಂತ ಜಾಸ್ತಿ ಮಾಡಲು ಬಜೆಟ್‍ನಲ್ಲಿ ಒಪ್ಪಿದ್ದೇವೆ. ಅಲ್ಲದೇ ಕನಕದಾಸ ಜಯಂತಿ ಆರಂಭಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.

ಪಾದಯಾತ್ರೆ ಆರಂಭಿಸಬೇಕೆಂದಾಗ ನಮಗೆ ಹೆದರಿಕೆಯಾಯಿತು. ಇದು ಸಾಧ್ಯವಾಗುತ್ತಾ ಎನ್ನುವ ಭಯವಿತ್ತು. ಅದರೆ, ಪಾದಯಾತ್ರೆ ಯಶಸ್ವಿಯಾಯಿತು. ಇಡೀ ಸಮುದಾಯ ಮತ್ತು ರಾಜಕಾರಣಿಗಳನ್ನುವನ್ನು ಪಾದಯಾತ್ರೆ ಒಂದು ಮಾಡಿತು. ಎಲ್ಲಾ ಸಮಾಜಗಳಿಗೂ ಮೀಸಲಾತಿ ಹೋರಾಟ ಮಾದರಿಯಾಯಿತು. ನಾವು ಕುರುಬ ಸಮಾಜಕ್ಕೆ ಮಾತ್ರ ಮೀಸಲಾತಿ ಕೇಳಲಿಲ್ಲ. ಕೋಲಿ, ಕುರುಬ, ಸವಿತಾ ಸಮಾಜ ಕೇಳಿದ್ದೇವೆ. ಇಬ್ಬರು ಸ್ವಾಮೀಜಿಗಳ ಪ್ರಯತ್ನ ಕುರುಬ ಸಮುದಾಯಕ್ಕೆ ಸೀಮಿತವಾಗಿಲ್ಲ. ಹಿಂದುಳಿದ ಸಮಾಜದ 35 ಸಮಾಜಗಳನ್ನು ಸೇರಿಸಿದ್ದರು ಎಂದರು.

ಇತ್ತೀಚಿನ ಸುದ್ದಿ