ವಿಪಕ್ಷ ನಾಯಕ ಆರ್.ಅಶೋಕ್ ಆರೋಪಗಳಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ - Mahanayaka
2:33 AM Saturday 25 - October 2025

ವಿಪಕ್ಷ ನಾಯಕ ಆರ್.ಅಶೋಕ್ ಆರೋಪಗಳಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

siddaramaiah
16/06/2024

ವಿಜಯಪುರ: ತೈಲ ದರ ಏರಿಕೆ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ವಿಜಯಪುರಯ  ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.

ಚುನಾವಣೆಗೂ ತೈಲ​ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ತೈಲ ದರ ನಾವು ಮೂರು ರೂಪಾಯಿ ಹೆಚ್ಚಳ ಮಾಡಿದ್ದೇವೆ. ಮೂರು ರೂ. ಹೆಚ್ಚಳ ಮಾಡಿದ್ದಕ್ಕೆ ಚುನಾವಣೆ ಸಂಬಂಧನಾ? ಎಂದು ಸಿಎಂ ಸಿದ್ದರಾಮಯ್ಯ  ಅಚ್ಚರಿಯಿಂದ ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಇದ್ದಾಗ ಶೇ.35ರಷ್ಟಿತ್ತು. ರಾಜ್ಯದಲ್ಲಿ 102.86 ಪೈಸೆ ಈಗಾ ಇದೆ. ತಮಿಳುನಾಡು ಸಮ ಆಗಿದೆ. ಕಾಸರಗೋಡು 106.06 ಪೈಸೆ, ಆಂಧ್ರಪ್ರದೇಶದಲ್ಲಿ 109 ರೂ. ಇದೆ. ಹೈದರಾಬಾದ್​ನಲ್ಲೂ ಹೆಚ್ಚಿದೆ. ಮಹಾರಾಷ್ಟ್ರ 104 ರೂ, ರಾಜಸ್ಥಾನ 104.86 ರೂ. ಮಧ್ಯಪ್ರದೇಶದ 106.47 ರೂ. ಇದೆ.

ರಾಜಸ್ಥಾನದಲ್ಲಿ ದರ 104.86 ರೂಪಾಯಿ ಇದೆ. ಮಧ್ಯಪ್ರದೇಶದಲ್ಲಿ 106 ರೂಪಾಯಿ ಇದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಯಾರ ಸರ್ಕಾರ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು 1 ಸ್ಥಾನ ಗೆದ್ದಿದ್ದೆವು. 2024ರ ಲೋಕಸಭೆ ಚುನಾವಣೆಯಲ್ಲಿ 9 ಸ್ಥಾನ ಗೆದ್ದಿದ್ದೇವೆ. ರಾಜ್ಯದಲ್ಲಿ ಬಿಜೆಪಿಯವರು 25ರಿಂದ 17 ಸ್ಥಾನಕ್ಕೆ ಕುಸಿದಿದೆ.  ನಾವು ಚುನಾವಣೆಯಲ್ಲಿ  ಸೋತಿಲ್ಲ, ಬಿಜೆಪಿ ಸೋತಿದೆ  ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ