ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸ್ವಾಮೀಜಿಗಳಿಗೆ ಕವರ್ ಹಂಚಿಕೆ | ಈ ಕವರ್ ನಲ್ಲಿ ಏನಿದೆ? - Mahanayaka
5:19 PM Tuesday 16 - September 2025

ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸ್ವಾಮೀಜಿಗಳಿಗೆ ಕವರ್ ಹಂಚಿಕೆ | ಈ ಕವರ್ ನಲ್ಲಿ ಏನಿದೆ?

swamiji meeting karnataka
21/07/2021

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬೆಂಬಲಿಸಲು ರಾಜ್ಯದ ವಿವಿಧ ಭಾಗಗಳಿಂದ ಬಂದ ಸ್ವಾಮೀಜಿಗಳಿಗೆ ಕವರ್ ಹಂಚಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಸ್ವಾಮೀಜಿಗಳು, ಯಡಿಯೂರಪ್ಪನವರನ್ನೇ ಸಿಎಂ ಆಗಿ ಮುಂದುವರಿಸಬೇಕು ಎಂದು ಆಗ್ರಹಿಸಿದ್ದರು. ಒಂದು ವೇಳೆ ಅವರನ್ನು ಸಿಎಂ ಸ್ಥಾನದಿಂದ ತೆಗೆದರೆ ಸಾಮೂಹಿಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮಠಾಧೀಶರು ಎಚ್ಚರಿಕೆಯನ್ನು ಕೂಡ ನೀಡಿದ್ದರು.

ಸಿಎಂ ಅಧಿಕೃತ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮಠಾಧೀಶರ ಸಮಾವೇಶವೇ ನಡೆದಂತಾಗಿದೆ. ಸಿಎಂ ಯಡಿಯೂರಪ್ಪನವರ ಸಮ್ಮುಖದಲ್ಲಿಯೇ ಕವರ್ ಹಂಚಲಾಗಿದೆ. ಈ ಕವರ್ ನಲ್ಲಿ ಏನಿರಬಹುದು? ಸ್ವಾಮೀಜಿಗಳಿಗೆ ಹಣ ಹಂಚಲಾಗಿದೆಯೇ? ಎನ್ನುವ ಅನುಮಾನಗಳು ಕೇಳಿ ಬಂದಿವೆ.

ರಾಜ್ಯ ರಾಜಕಾರಣ ಮತ್ತೊಮ್ಮೆ ದೇಶದ ಗಮನ ಸೆಳೆಯುತ್ತಿದೆ. ಈ ಬಾರಿ ಮಠಾಧೀಶರು ನೇರವಾಗಿ ರಾಜಕೀಯಕ್ಕೆ ಇಳಿಯುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾರೆ. ಈ ಬೆಳವಣಿಗೆ ಉತ್ತಮವಾದದ್ದು ಅಲ್ಲ, ರಾಜಕೀಯ ಮಾಡುವುದು ಮಠಾಧೀಶರ ಕೆಲಸ ಅಲ್ಲ ಎನ್ನುವ ಅಭಿಪ್ರಾಯಗಳು ಸದ್ಯ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಮುಹೂರ್ತ ಫಿಕ್ಸ್!?  | ಬಿಜೆಪಿ ಪಾಳಯದೊಳಗೆ ಕೇಳಿ ಬರುತ್ತಿರುವ ಸುದ್ದಿ ಏನ್ ಗೊತ್ತಾ?

ಆಂಬುಲೆನ್ಸ್ ಮುಂದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಆರೋಪಿ ಪೊಲೀಸ್ ವಶಕ್ಕೆ

“ಒಂದು ರೀತಿಯಲ್ಲಿ ಕನ್ನಡಿಗರು ನಪುಂಸಕರು” ಎಂದು ಭಗವಾನ್ ಹೇಳಿದ್ದೇಕೆ?

ದಲಿತ ಯುವಕನ ಕುದುರೆ ಸವಾರಿಗೆ ಅಡ್ಡಿಪಡಿಸಿದ 9 ಮಂದಿಗೆ 5 ವರ್ಷ ಜೈಲೂಟ | ದೌರ್ಜನ್ಯದ ವಿರುದ್ಧ ದೊರಕಿತು ನ್ಯಾಯ

ಇತ್ತೀಚಿನ ಸುದ್ದಿ