ಪೌರ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಕರಾವಳಿ ಟೀಮ್ - Mahanayaka

ಪೌರ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಕರಾವಳಿ ಟೀಮ್

bajpe
15/08/2023

ಕರಾವಳಿ ಟೀಮ್ ವತಿಯಿಂದ ಪೌರ ಕಾರ್ಮಿಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ 77ನೇ ಸ್ವಾತಂತ್ರ್ಯ ದಿನಾಚರಣೆ ಬಜ್ಪೆ ಜಂಕ್ಷನ್ ನಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಎಂ.ದೇವದಾಸ್ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿಸಾರ್ ಕರಾವಳಿ ಅಧ್ಯಕ್ಷರು ಐಟಿ ಸೆಲ್ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ವಹಿಸಿದರು.

ಮುಖ್ಯ ಅತಿಥಿಗಳಾಗಿ ಸಿರಾಜ್ ಬಜ್ಪೆ,ಶಿವರಾಂ ಪೂಜಾರಿ, ಬಿ.ಜೆ.ರಹೀಮ್, ರಾಕೇಶ್ ಕುಂದರ್, ಉಮೇಶ್ ಶೆಟ್ಟಿ, ಜೇಕಬ್ ಪಿರೇರಾ, ಅಶ್ರಫ್ ಮಾಚಾರ್, ಜಲಾಲುದ್ದೀನ್ ಮರವೂರು, ಮಂಜಪ್ಪ ಪುತ್ರನ್, ಹನೀಫ್ ಹಿಲ್ ಟಾಪ್, ನಜಿರ್ ಕಿನ್ನಿಪದವ, ಖಾದರ್ ಏರ್ಪೋರ್ಟ್, ಎಂ.ಕೆ.ಅಶ್ರಫ್ ಹಕೀಮ್ ಪ್ಯಾರಾ ಮತ್ತು ಊರಿನ ಗಣ್ಯರು ಭಾಗವಹಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಹಫೀಜ್ ಕೊಳಂಬೆ ನಿರ್ವಹಿಸಿದರು.

ಇತ್ತೀಚಿನ ಸುದ್ದಿ