ಪ್ರಯಾಣಿಕರ ಹಣ ಕದ್ದ ಆರೋಪಿಯನ್ನು ಹಿಡಿದುಕೊಟ್ಟ ನಿರ್ವಾಹಕ, ಚಾಲಕನಿಗೆ ಪೊಲೀಸ್ ಆಯುಕ್ತರಿಂದ ಗೌರವ
ಬೆಂಗಳೂರು: ಪ್ರಯಾಣಿಕನ ಬ್ಯಾಗ್ನಲ್ಲಿದ್ದ 5 ಲಕ್ಷ ಹಣವನ್ನು ಕದ್ದೊಯ್ಯುತ್ತಿದ್ದ ಆರೋಪಿಯನ್ನು ಹಿಡಿದಿದ್ದ ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ನಿರ್ವಾಹಕರನ್ನು ಬೆಂಗಳೂರು ಪೊಲೀಸ್ ಆಯುಕ್ತರು ಗೌರವಿಸಿ ಸನ್ಮಾನಮಾಡಿದ್ದಾರೆ.
ಕಳೆದಜೂನ್ 14 ರಂದು ಪಾಂಡಿಚೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸ್ಗೆ ಮೆಜೆಸ್ಟಿಕ್ ಹೋಗಲು ಇಬ್ಬರು ಹತ್ತಿದ್ದರಾದರೂ ಅವರು ಎಲೆಕ್ಟ್ರಾನಿಕ್ ಸಿಟಿ ಮಾರ್ಗಮಾಧ್ಯದಲ್ಲಿಯೇ ಬಸ್ ನಿಲ್ಲಿಸುವಂತೆ ಹೇಳಿದ್ದು,ಇದನ್ನು ಅನುಮಾನದಿಂದ ಗಮನಿಸಿದ ನಿರ್ವಾಹಕರಿಗೆ ಅವರ ಮೇಲೆ ಅನುಮಾನ ಬಂದಿದೆ.
ಆಗ ಅಲ್ಲಿ ಪ್ರಯಾಣಿಕರೊಬ್ಬರು ಇಳಿದು ಹೋಗುತ್ತಿದ್ದಂತೆ ಬ್ಯಾಗ್ ಪರಿಶೀಲಿಸಿದ್ದು, ನಿರ್ವಾಹಕರಿಗೆ ಐದು ಲಕ್ಷ ಹಣ ಬಸ್ಸಿನಲ್ಲಿದ್ದದ್ದು ಕಾಣೆಯಾಗಿದೆ ಎಂದಿದ್ದಾರೆ. ಆಗ ಈ ಇಬ್ಬರು ಆರೋಪಿಗಳು ಓಡಲು ಪ್ರಾರಂಭಿಸಿದ್ದಾರೆ. ಕೂಡಲೇ ನಿರ್ವಾಹಕ ಚೆಸ್ ಮಾಡಿ ಇಬ್ಬರಲ್ಲಿ ಓರ್ವನನ್ನು ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರಿಗೆ ಹೀಗೆ ನೆರವಾದ ಬಸ್ ಕಳ್ಳನನ್ನು ಹಿಡಿದುಕೊಟ್ಟ ಇಬ್ಬರನ್ನುಇಂದು ಪೊಲೀಸ್ ಆಯುಕ್ತ ಬಹುಮಾನ ನೀಡಿ ಸನ್ಮಾನ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























