ಹನುಮಂತನನ್ನು ವ್ಯಕ್ತಿ ಅಥವಾ ಸಂಘಟನೆಗೆ ಹೋಲಿಸುವುದು ಹನುಮಂತನಿಗೆ ಮಾಡುವ ಅವಮಾನ: ರಣದೀಪ್‌ ಸಿಂಗ್‌ ಸುರ್ಜೇವಾಲಾ - Mahanayaka

ಹನುಮಂತನನ್ನು ವ್ಯಕ್ತಿ ಅಥವಾ ಸಂಘಟನೆಗೆ ಹೋಲಿಸುವುದು ಹನುಮಂತನಿಗೆ ಮಾಡುವ ಅವಮಾನ: ರಣದೀಪ್‌ ಸಿಂಗ್‌ ಸುರ್ಜೇವಾಲಾ

randeep singh surjewala
03/05/2023


Provided by

ಬೆಂಗಳೂರು: ಹನುಮಂತನನ್ನು  ಒಬ್ಬ ವ್ಯಕ್ತಿ ಅಥವಾ ಒಂದು ಸಂಘಟನೆಗೆ ಹೋಲಿಸುವುದು ಹನುಮಂತನಿಗೆ ಮಾಡುವ ಅವಮಾನ, ಪ್ರಧಾನಿ ನರೇಂದ್ರ ಮೋದಿ ಅವರು ಹನುಮ ಭಕ್ತರ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಬಜರಂಗದಳ ನಿಷೇಧ ಕುರಿತಂತೆ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿರುವ ಉಲ್ಲೇಖದ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ ಬಳಿಕ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಮಹಾನ್‌ ವ್ಯಕ್ತಿಯಾದ ಹನುಮಂತನನ್ನು ಒಬ್ಬ ವ್ಯಕ್ತಿ ಅಥವಾ ಸಂಘಟನೆಗೆ ಹೋಲಿಸುವುದು ಹನುಮಂತನಿಗೆ ಮಾಡಬಹುದಾದ ದೊಡ್ಡ ಅವಮಾನ. ಮೋದಿಯವರು ಹನುಮಂತನ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಎಲ್‌. ಸಂತೋಷ್ ಅವರ ಕಾರ್ಖಾನೆಯಲ್ಲಿ ಇಂತಹ ಸುಳ್ಳನ್ನು ಸೃಷ್ಟಿಸಲಾಗಿದೆ. ಇದರ ವಿರುದ್ಧ ಹನುಮಂತನ ಲಕ್ಷಾಂತರ ಭಕ್ತರು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ರಾಜಧರ್ಮ ಪಾಲನೆ, ಗೌರವ, ಕರ್ತವ್ಯ, ಸೇವೆ ಮತ್ತು ತ್ಯಾಗದ ಪ್ರತೀಕವಾದ ಹನುಮಂತನನ್ನು ಒಬ್ಬ ವ್ಯಕ್ತಿ ಮತ್ತು ಅಥವಾ ಸಂಘಟನೆಗೆ ಹೋಲಿಸುವುದು ಹನುಮಂತನಿಗೆ ಮಾಡುವ ಅವಮಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಮತ್ತು ಅವರ ಸಂಗಡಿಗರು ರಾಜ್ಯದ ಬಿಜೆಪಿ ಸರ್ಕಾರದ ಶೇಕಡ 40ರಷ್ಟು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಕೇವಲ ಸಮಾಜ ವಿಭಜಿಸಿ ಚುನಾವಣೆ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ದ್ವೇಷದ ರಾಜಕೀಯದ ಬಗ್ಗೆ ಉತ್ತರಿಸುತ್ತಿಲ್ಲ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ