ಮಹಾರಾಷ್ಟ್ರದಲ್ಲಿ ಎನ್ ಡಿಎ ಪರ ಅಡ್ಡ ಮತದಾನ ಮಾಡಿದ 7 ಶಾಸಕರು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯು, ಬಿಜೆಪಿ, ಶಿವಸೇನೆ ಮತ್ತು ಎನ್ ಸಿಪಿ-ಅಜಿತ್ ಪವಾರ್ ಒಳಗೊಂಡ ಆಡಳಿತಾರೂಢ ಮಹಾಯುತಿ ವಿರುದ್ಧ ಹಿನ್ನಡೆಯನ್ನು ಅನುಭವಿಸಿದೆ. ಮಹಾಯುತಿ 11 ವಿಧಾನ ಪರಿಷತ್ ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದರೆ, ಎನ್ ಡಿಎಗೆ ಹಾನಿ ಮಾಡಲು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಎಂವಿಎ ಕ್ರಮ ಉಲ್ಟಾ ಆಯ್ತು. ಏಳು ಕಾಂಗ್ರೆಸ್ ಶಾಸಕರು ಮಹಾಯುತಿ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿರುವುದು ಬಯಲಾಗಿದೆ.
ಎಂವಿಎ 48 ಲೋಕಸಭಾ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಆದರೆ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸೆಮಿಫೈನಲ್ ಎಂದು ಹೇಳಲಾದ ವಿಧಾನ ಪರಿಷತ್ ಚುನಾವಣೆಯಲ್ಲಿ ಅದು ಭಾರಿ ಹಿನ್ನಡೆಯನ್ನು ಎದುರಿಸಿದೆ.
ಪ್ರತಿಪಕ್ಷಗಳ ಮೈತ್ರಿಕೂಟವು ತಮ್ಮ ಲಭ್ಯವಿರುವ ಮತಗಳನ್ನು ಮೀರಿ ಹೆಚ್ಚುವರಿ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡುವ ಮೂಲಕ ಚುನಾವಣೆಯನ್ನು ಎದುರಿಸಿತ್ತು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಶಾಸಕರ ಬಲವಿದೆ. ಆದರೆ ಕೆಲವು ಶಾಸಕರ ರಾಜೀನಾಮೆಯಿಂದಾಗಿ ಪ್ರಸ್ತುತ ಬಲ 274 ಆಗಿದೆ. ಆದ್ದರಿಂದ, ಪ್ರತಿ ಎಂಎಲ್ಸಿ ಅಭ್ಯರ್ಥಿಗೆ ಚುನಾವಣೆಯಲ್ಲಿ ಗೆಲ್ಲಲು 23 ಮೊದಲ ಪ್ರಾಶಸ್ತ್ಯದ ಮತಗಳು ಬೇಕಾಗುತ್ತವೆ. ಮಹಾಯುತಿ 201 ಶಾಸಕರನ್ನು ಹೊಂದಿದ್ದು, ಎಂಟು ಅಭ್ಯರ್ಥಿಗಳ ಗೆಲುವಿಗೆ ಸಾಕಾಗುತ್ತದೆ ಮತ್ತು ಅದರ ಒಂಬತ್ತನೇ ಅಭ್ಯರ್ಥಿಯನ್ನು ಗೆಲ್ಲಲು ಆರು ವಿರೋಧ ಪಕ್ಷದ ಶಾಸಕರ ಬೆಂಬಲ ಬೇಕಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth