ಭೂಮಂಜೂರಾತಿಯಲ್ಲಿ ಅಕ್ರಮ: ಸಮಗ್ರ ತನಿಖೆಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಒತ್ತಾಯ - Mahanayaka

ಭೂಮಂಜೂರಾತಿಯಲ್ಲಿ ಅಕ್ರಮ: ಸಮಗ್ರ ತನಿಖೆಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಒತ್ತಾಯ

congress
27/07/2023


Provided by

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಭೂ ಸಕ್ರಮಿಕರಣ (ಅಕ್ರಮ- ಸಕ್ರಮ)ಸಮಿತಿಯು 2018ರಿಂದ 2023ರವರೆಗೆ ಭೂಕಂದಾಯ ನಿಯಮಗಳನ್ನು ಉಲ್ಲಂಘಿಸಿ ಭೂ ಮಂಜೂರಾತಿ ಮಾಡುವ ಮೂಲಕ ಅಕ್ರಮಗಳನ್ನು ನಡೆಸಿದೆ.

ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಪದ್ಮನಾಭ ಸಾವಂತ್ ಆರೋಪಿಸಿದ್ದಾರೆ.

ಅವರು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕುಮ್ಕಿ ಮಿತಿಯಲ್ಲಿ ಇರುವ ಜಾಗ ಮಂಜೂರಾತಿಗೆ ಅವಕಾಶವಿಲ್ಲ. ಬಂಟಾಳದ ಅಕ್ರಮ ಸಕ್ರಮ ಸಮಿತಿಯು 2018ರಿಂದ 2023ರ ಅವಧಿಯಲ್ಲಿ ಸಾರ್ವಜನಿಕ ಮತ ಓಲೈಕೆಗಾಗಿ ನಿಯಮಾವಳಿ ಉಲ್ಲಂಘಿಸಿ ಅರ್ಜಿದಾರರಿಗೆ ಮಂಜೂರಾತಿ ಮಾಡಿದೆ. ಅರಣ್ಯ ವ್ಯಾಪ್ತಿಗೆ ಒಳಪಟ್ಟ ಜಾಗವ್ನನು ಕೂಡಾ ಕಂದಾಯ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರಿ ಮಂಜೂರು ಮಾಡಿದ್ದು, ಡಿಸಿ ಮನ್ನಾ ಹಾಗೂ ಗೋಮಾಳ ಜಮೀನನ್ನು ಸುಳ್ಳು ವರದಿ ತಯಾರಿಸಿ ಮಂಜೂರು ಮಾಡಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ