ಕಾಂಗ್ರೆಸ್ ಪಕ್ಷ ಅಂಬೇಡ್ಕರ್, ಸಂವಿಧಾನ ವಿರೋಧಿ : ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಲಾಲ್ ಸಿಂಗ್

ಚಾಮರಾಜನಗರ: ಕಾಂಗ್ರೆಸ್ ಪಕ್ಷ ಅಂಬೇಡ್ಕರ್, ಸಂವಿಧಾನ ಹಾಗೂ ಬಡವರ ವಿರೋಧಿಯಾಗಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಚಿವ ಲಾಲ್ ಸಿಂಗ್ ಆರ್ಯ ಆರೋಪಿಸಿದರು.
ಚಾಮರಾಜನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ದಲಿತರು, ಹಾಗೂ ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ತನ್ನ ಆಡಳಿತದ ಉದ್ದಕ್ಕೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು, ಅವರ ಸ್ಮಾರಕ ನಿರ್ಮಾಣ ಮಾಡುವಲ್ಲಿ ವಿಫಲವಾಯಿತು, ಭಾರತ ರತ್ನ ನೀಡಲಿಲ್ಲ, ದಲಿತರ ನಾಯಕರನ್ನು ತುಳಿದಿದೆ ಎಂದು ಕಿಡಿಕಾರಿದರು.
ಡಬಲ್ ಇಂಜನ್ ಸರ್ಕಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು 2015 ರಲ್ಲಿ ಸಂವಿಧಾನ ಸಮರ್ಪಣೆ ಮಾಡಿದ ದಿನವನ್ನು ಘೋಷಣೆ ಮಾಡಿದರು, ಅಂಬೇಡ್ಕರ್ ರವರ ಪಂಚತೀರ್ಥ ಕ್ಷೇತ್ರಗಳಾದ ಮಹಾರಾಷ್ಟ್ರ, ಮುಂಬೈಯಿ , ನಾಗಪುರ್, ದೆಹಲಿ, ಮಧ್ಯಪ್ರದೇಶ ಗಳಲ್ಲಿ ಅಭಿವೃದ್ದಿ ಪಡಿಸುವ ಮೂಲಕ ಗೌರವ ತಂದುಕೊಟ್ಟರು ಎಂದರು.
ದೇಶದಲ್ಲಿ 57 ವರ್ಷಗಳ ಅಡಳಿತ ನಡೆಸಿದ ಕಾಂಗ್ರೆಸ್ ಮನೆಮನೆಗೆ ಸವಲತ್ತುಗಳನ್ನು ತಲುಪಿಸಿದಿದ್ದರೆ. ಬಿಜೆಪಿ ಸರ್ಕಾರ ಸ್ವಚ್ಚಭಾರತ್ ಅಭಿಯಾನದಡಿಯಲ್ಲಿ ಮನೆಮನೆಗೂ ಶೌಚಾಲಯ, ಅಯುಷ್ಮಾನ್ ಭಾರತ್ , ಜನಧನ್ ಖಾತೆ, ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಕಾಲಾಹರಣ ಮಾಡಿತ್ತು ಎಂದು ಟೀಕಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw