ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್ - Mahanayaka
10:29 AM Saturday 23 - August 2025

ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್

arun singh
19/09/2021


Provided by

ಬೆಂಗಳೂರು: ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ದಾವಣಗೆರೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತವಿದ್ದಾಗ ಫಲಾನುಭವಿಗಳಿಗೆ ಶೇ.15ರಷ್ಟು ಹಣ ತಲುಪುತ್ತಿತ್ತು. ಆದರೆ, ಈಗ 100ಕ್ಕೆ ನೂರರಷ್ಟು ಹಣ ಜನರನ್ನು ತಲುಪುತ್ತಿದೆ ಎಂದ ಅವರು, ಉಜ್ವಲ ಗ್ಯಾಸ್, ವಿದ್ಯುತ್ ಸಂಪರ್ಕ, ಜನ್‍ ಧನ್, ಕಿಸಾನ್ ಸಮ್ಮಾನ್ ಯೋಜನೆ ಸೇರಿ ಎಲ್ಲ ಯೋಜನೆಗಳ ಕುರಿತು ಜನರಿಗೆ ತಿಳಿಸಿ ಪಕ್ಷ ಸಂಘಟಿಸಲು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಕೇಂದ್ರ- ರಾಜ್ಯ ಸರಕಾರದ ಐತಿಹಾಸಿಕ ಸಾಧನೆಗಳನ್ನು ಜನರ ಮುಂದಿಡಬೇಕು. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‍ ಮುಖಂಡರಿಗೆ ಪಾಠ ಕಲಿಸಿ. ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚು ಆಕ್ರಮಣಕಾರಿಯಾಗಿ ಕೆಲಸ ನಿರ್ವಹಿಸಬೇಕಿದೆ. ಪ್ರಚಾರ- ಪ್ರಸಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಬೇಕಿದೆ ಎಂದು ಸಲಹೆ ಮಾಡಿದರು.

6 ದಶಕಗಳ ಕಾಲ ದೇಶದ ಆಡಳಿತ ಮಾಡಿದ ಕಾಂಗ್ರೆಸ್ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಮನೆ ನಿರ್ಮಾಣ, ಮನೆ ಮನೆಗೆ ನಳ್ಳಿ ನೀರು ಒದಗಿಸುವುದು, ಗ್ಯಾಸ್ ಸಂಪರ್ಕ, ಆರೋಗ್ಯ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ವಿಫಲವಾಗಿತ್ತು. ಈ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಕೇಂದ್ರ ಸರಕಾರ ಅತ್ಯದ್ಭುತವಾಗಿ ಕೆಲಸ ಮಾಡಿ ಜನಸೇವೆ ಮಾಡುತ್ತಿದೆ ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!

ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು!

ಪತಿಯ ಇನ್ನೊಂದು ಮುಖ ಬಯಲಾಗುತ್ತಿದ್ದಂತೆಯೇ ನೇಣಿಗೆ ಶರಣಾದ 4 ತಿಂಗಳ ಗರ್ಭಿಣಿ

ಬೋರ್ ವೇಲ್ ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ತಿರುವು: ತಂದೆಯಿಂದಲೇ ನಡೆದಿತ್ತು ಹೀನ ಕೃತ್ಯ

ಮಗಳನ್ನು ಚುಡಾಯಿಸಬೇಡ ಎಂದಿದ್ದಕ್ಕೆ ಬಾಲಕಿಯ ತಂದೆಗೆ ಮಾರಣಾಂತಿಕ ಹಲ್ಲೆ!

ಇತ್ತೀಚಿನ ಸುದ್ದಿ