ಕಾಂಗ್ರೆಸ್ ನಲ್ಲಿ ಹಳ್ಳಿಯಿಂದ ಡೆಲ್ಲಿವರೆಗೆ ಬರೇ ಲೀಡರ್ ಗಳೇ ತುಂಬಿದ್ದಾರೆ | ಬಿಜೆಪಿ ಕಾರ್ಯಕರ್ತರನ್ನು ಹೊಗಳಿದ ಸಿಎಂ ಬೊಮ್ಮಾಯಿ - Mahanayaka
4:57 PM Wednesday 20 - August 2025

ಕಾಂಗ್ರೆಸ್ ನಲ್ಲಿ ಹಳ್ಳಿಯಿಂದ ಡೆಲ್ಲಿವರೆಗೆ ಬರೇ ಲೀಡರ್ ಗಳೇ ತುಂಬಿದ್ದಾರೆ | ಬಿಜೆಪಿ ಕಾರ್ಯಕರ್ತರನ್ನು ಹೊಗಳಿದ ಸಿಎಂ ಬೊಮ್ಮಾಯಿ

basavaraj bommai
07/08/2021


Provided by

ಬೆಂಗಳೂರು: ಕಾಂಗ್ರೆಸ್ ನವರು ಅಧಿಕಾರ ಇದ್ದಾಗ ಕಬ್ಬಿಣ ರೀತಿಯಲ್ಲಿ ಗಟ್ಟಿಯಾಗಿರುತ್ತಾರೆ. ಅಧಿಕಾರ ಹೋದಾಗ ಹತ್ತಿಯಂತಾಗುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ನಾಯಕರನ್ನು ಚುಚ್ಚಿದ್ದಾರೆ.

ಆರೋಗ್ಯ ಸ್ವಯಂ ಸೇವಕರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ,  ಬಿಜೆಪಿಗೆ ಸೇವೆಯೇ ಜೀವಾಳ, ಬೇರೆ ಪಕ್ಷಗಳಿಗೆ ಅಧಿಕಾರವೇ ಬಂಡವಾಳ.  ಸಮಾಜ ಸೇವೆಗೆ ತುಡಿಯುವ ಬಿಜೆಪಿಯ ಕಾರ್ಯಕರ್ತರೇ ಪಕ್ಷದ ಶಕ್ತಿಯಾಗಿದೆ. ಕಾಂಗ್ರೆಸ್ ನಲ್ಲಿ ಹಳ್ಳಿಯಿಂದ ಡೆಲ್ಲಿಯವರೆಗೆ ಬರೇ ಲೀಡರ್ ಗಳು ಮಾತ್ರವೇ ತುಂಬಿದ್ದಾರೆ ಎಂದು ಅವರು ಕಾಂಗ್ರೆಸ್ ಗೆ ಕುಟುಕಿದರು.

ಆರೆಸ್ಸೆಸ್ ನ ಸೇವಾ ಮನೋಭಾವ ಪಕ್ಷದ ಗರಿಮೆಯಾಗಿದೆ. ಇನ್ನೂ ಮೂರನೇ ಅಲೆ ತಡೆಗೆ ಸರ್ಕಾರದ ಜೊತೆಗೆ ಕೈಜೋಡಿಸಲು ಮುಂದಾಗಿರುವ ಪಕ್ಷದ ಸ್ವಯಂ ಸೇವಕರಿಗೆ ಎಲ್ಲ ನೆರವುಗಳನ್ನೂ ನೀಡಲಾಗುವುದು ಎಂದು  ಬೊಮ್ಮಾಯಿ ತಿಳಿಸಿದರು.

ಇನ್ನಷ್ಟು ಸುದ್ದಿಗಳು…

ತ್ರಿಪುರ ಸಿಎಂ ವಿಪ್ಲವ್ ಕುಮಾರ್ ದೇವ್ ಮೇಲೆ ಕಾರು ಹರಿಸಿ ಹತ್ಯೆಗೆ ಯತ್ನ: ಮೂವರ ಬಂಧನ

ಮತ್ತೆ ಕೃಷ್ಣನ ತಂತ್ರಗಾರಿಗೆ ತೋರುತ್ತಾರಾ ರಮೇಶ್ ಜಾರಕಿಹೊಳಿ?

ಮಾಡದ ತಪ್ಪಿಗೆ ಅಗ್ನಿ ಪರೀಕ್ಷೆ ಎದುರಿಸಿ ಬಂದಿದ್ದೇನೆ | ಕ್ಷೇತ್ರದ ಜನತೆ ಎದುರು ಶಶಿಕಲಾ ಜೊಲ್ಲೆ ಭಾವುಕ

ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ

ಬಿಗ್ ನ್ಯೂಸ್:  ರಾಜಕೀಯ ನಿವೃತ್ತಿ ಘೋಷಿಸಿದ ಸಂಸದ ಶ್ರೀನಿವಾಸ್ ಪ್ರಸಾದ್

403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್

ಇತ್ತೀಚಿನ ಸುದ್ದಿ