ಪ್ಯಾಲೆಸ್ತೇನ್‌ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ - Mahanayaka
10:11 AM Saturday 23 - August 2025

ಪ್ಯಾಲೆಸ್ತೇನ್‌ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್

10/10/2023


Provided by

ಪ್ಯಾಲೆಸ್ತೇನ್‌ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡುವುದಾಗಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ಘೋಷಿಸಿದೆ.

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿಯ ಕುರಿತಾದ ವಿಚಾರ ಕಾಂಗ್ರೆಸ್‌ನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ ನಡುವೆ ಉಂಟಾಗಿರುವ ಸಂಘರ್ಷದ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ದಾಳಿಯನ್ನು ಖಂಡಿಸಿ ಕದನ ವಿರಾಮಕ್ಕೆ ಕರೆ ನೀಡಿದೆ.

ಈ ವೇಳೆ ಪ್ಯಾಲೆಸ್ತೇನ್‌ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡುತ್ತೇವೆ ಎಂದು ಕಾಂಗ್ರೆಸ್‌ ತಿಳಿಸಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡರಾದ ಜೈರಾಮ್‌ ರಮೇಶ್‌ ಹಾಗೂ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಮೊದಲಿನಿಂದ ಪ್ಯಾಲೆಸ್ತೇನ್‌ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡುತ್ತಾ ಬಂದಿದೆ. ಅದೇ ನೀತಿಯನ್ನು ಈಗಲೂ ಮುಂದುವರಿಸಿದೆ. ಪ್ಯಾಲೆಸ್ತೇನ್‌ ಕುರಿತಾದ ಕಾಂಗ್ರೆಸ್ ಪಕ್ಷದ್ದು ಹಾಗೂ ವಾಜಪೇಯಿ ಅವರ ನಿಲುವು ಒಂದೇ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ವಿದೇಶಾಂಗ ನಿಲುವು ಒಂದೇ ಆಗಿರುತ್ತದೆ. ಈ ಕುರಿತು ಕಾರ್ಯಕಾರಿಣಿಯಲ್ಲಿ ಹೆಚ್ಚು ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ