ವಿವಾಹಿತೆ ಜೊತೆ ಪೊಲೀಸಪ್ಪನ ವಿವಾಹೇತರ ಸಂಬಂಧ: ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ನಾಪತ್ತೆ!!
ಚಾಮರಾಜನಗರ: ನ್ಯಾಯ ಕೊಡಿಸಬೇಕಾದ ಪೊಲೀಸ್ ನಿಂದಲೇ ಮಹಿಳೆ ಅನ್ಯಾಯಕ್ಕೊಳಗಾಗಿ ಅತಂತ್ರಳಾಗಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.
41 ವರ್ಷದ ವಿವಾಹಿತ ಮಹಿಳೆ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದ ಚಾಮರಾಜನಗರ ಪೂರ್ವ ಠಾಣೆಯ ಕಾನ್ಸ್ಟೇಬಲ್ ಅಶೋಕ್ ಎಂಬಾತ 20 ದಿನಗಳಿಂದ ನಾಪತ್ತೆಯಾಗಿದ್ದು ಮಹಿಳೆ ನ್ಯಾಯಕ್ಕಾಗಿ ಮಹಿಳಾ ಠಾಣೆ ಮೇಲೆರಿದ್ದಾಳೆ.
ಏನಿದು ಪ್ರೇಮ್ ಕಹಾನಿ!?
ಚಾಮರಾಜನಗರ ತಾಲೂಕಿನ ಗ್ರಾಮವೊಂದರ 41 ವರ್ಷದ ಮಹಿಳೆ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಕಳೆದ 2020 ರಿಂದ ಪರಿಚಿತರಾಗಿದ್ದು ಪರಿಚಯ ಸಲುಗೆ ಪಡೆದುಕೊಂಡು ವಿವಾಹೇತರ ಸಂಬಂಧದ ತನಕ ಬಂದು ಮುಟ್ಟಿದೆ. ಇವರ ಕಹಾನಿ ಮತ್ತಷ್ಟು ಗಟ್ಟಿಯಾದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಚಾಮರಾಜನಗರದಲ್ಲೇ ಮನೆ ಮಾಡಿ ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದರು. ಆದರೆ, ಪೋಷಕರ ಒತ್ತಾಯದಿಂದ ಅಶೋಕ್ ಪ್ರೇಯಸಿ ಜೊತೆ ಅಂತರ ಕಾಯ್ದುಕೊಂಡು ಬೇರೆ ಮದುವೆಯಾಗಲು ತಯಾರಿ ನಡೆಸುತ್ತಿದ್ದು ತನಗೇ ಆತನ ಜೊತೆಯೇ ಜೀವನ ಸಾಗಿಸಬೇಕೆಂದು ವಿವಾಹಿತೆ ಪಟ್ಟು ಹಿಡಿದಿದ್ದಾಳೆ.
ತಾಳಿ ಭಾಗ್ಯ ಕರುಣಿಸಿ ಕೈ ಕೊಟ್ಟ ಪೋಲಿಸಪ್ಪ..!?
ಪೊಲೀಸ್ ವಸತಿ ನಿಲಯದಲ್ಲೇ ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದ ವೇಳೆ ದೇವರ ಫೋಟೋ ಮುಂದೆ ಅರಿಶಿನ ಕೊಂಬು ಕಟ್ಟಿದರಂತೆ ಅಶೋಕ್. ಜೊತೆಗೆ, ವಿವಾಹೇತರ ಸಂಬಂಧದ ವಾಟ್ಸ್ ಆ್ಯಪ್ ಚಾಟ್, ಫೋಟೋಗಳ ಜೊತೆ ಸಂತ್ರಸ್ತ ಮಹಿಳೆ ತನಗೇ ತನ್ನ ಪ್ರಿಯಕರ ಬೇಕು , ಆತನ ಜೊತೆ ಜೀವನ ನಡೆಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ, ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಅಶೋಕ್ ಸೇರಿದಂತೆ ಅವರ ಪಾಲಕರ ವಿರುದ್ಧ ಮಹಿಳೆ ದೂರು ಕೊಟ್ಟು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























