ಕೊರೊನಾ ಪಾಸಿಟಿವ್ ವರದಿಯೂ ಸಿಕ್ಕಿಲ್ಲ, ಯಾರು ಕರೆ ಕೂಡ ಮಾಡಿಲ್ಲ | ನಟಿ ಅನುಪ್ರಭಾಕರ್ - Mahanayaka
11:53 PM Wednesday 28 - January 2026

ಕೊರೊನಾ ಪಾಸಿಟಿವ್ ವರದಿಯೂ ಸಿಕ್ಕಿಲ್ಲ, ಯಾರು ಕರೆ ಕೂಡ ಮಾಡಿಲ್ಲ | ನಟಿ ಅನುಪ್ರಭಾಕರ್

anuprabhakar
22/04/2021

ಬೆಂಗಳೂರು: ನನಗೆ ಕೊರೊನಾ ಪಾಸಿಟಿವ್ ಎಂದು ಏಪ್ರಿಲ್ 17ರಂದು ಮೆಸೆಜ್ ಬಂದಿತ್ತು. ಆದರೆ ನನಗೆ ಕೊರೊನಾ ಬಂದ ಮೇಲೆ ಯಾವುದೇ ಅಧಿಕಾರಿಗಳು ಕರೆ ಮಾಡಿಲ್ಲ,  ವೆಬ್ ಸೈಟ್ ನಲ್ಲಿ ಕೂಡ ವರದಿ ಅಪ್ ಲೋಡ್ ಮಾಡಲಾಗಿಲ್ಲ ಎಂದು ನಟಿ ಅನುಪ್ರಭಾಕರ್ ಟ್ವೀಟ್  ಮಾಡಿದ್ದಾರೆ.

ಸಚಿವ ಸುಧಾಕರ್ ಅವರನ್ನು ಟ್ಯಾಗ್ ಮಾಡಿರುವ ಮಾಡಿರುವ ಅನುಪ್ರಭಾಕರ್, ಗೌರವಾನ್ವಿತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ.. ನನಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದಿನಾಂಕ 17-04-2021ರಂದು ಸಂದೇಶದ ಮೂಲಕ ತಿಳಿಯಿತು. ಆದ್ರೇ.. ಇದುವರೆಗೆ ನನ್ನ ಎಸ್ ಆರ್ ಎಫ್ ಐಡಿಯ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ. ಇದುವರೆಗೆ ನಾನು ಬಿಯು ನಂಬರ್ ಕೂಡ ಪಡೆದಿಲ್ಲ. ಅಲ್ಲದೇ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಕೂಡ ಕಾಲ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಯಾರನ್ನು ಕೇಳಬೇಕು? ಎಂದು ಅನುಪ್ರಭಾಕರ್ ಪ್ರಶ್ನಿಸಿದ್ದಾರೆ. ಕೊರೊನಾಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಸುಸ್ತಾಗಿರುವಂತೆ ಕಂಡು ಬಂದಿದೆ. ಮಿತಿ ಮೀರಿದ ವೇಗದಲ್ಲಿ ಕೊರೊನಾ ಹರಡುತ್ತಿದ್ದು, ಕೊರೊನಾ ಸೋಂಕಿತರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ. ಸೆಲೆಬ್ರೆಟಿಗಳಿಗೆ ಈ ಸ್ಥಿತಿ ಬಂದರೆ, ಇನ್ನು ಜನಸಾಮಾನ್ಯರ ಸ್ಥಿತಿ ಏನು ಎಂದು ಪ್ರಶ್ನಿಸುವಂತಾಗಿದೆ.

 

ಇತ್ತೀಚಿನ ಸುದ್ದಿ