ಕೊರೊನಾದಿಂದಾಗಿ ಸಾವಿನ ಹಾದಿ ಹಿಡಿದ ಇಡೀ ಕುಟುಂಬ! - Mahanayaka
8:05 PM Thursday 16 - October 2025

ಕೊರೊನಾದಿಂದಾಗಿ ಸಾವಿನ ಹಾದಿ ಹಿಡಿದ ಇಡೀ ಕುಟುಂಬ!

rekha shivakumar
19/04/2021

ನೆಲಮಂಗಲ: ಕೊರೊನಾದಿಂದ ಇಡೀ ಕುಟುಂಬವೇ ಸಾವಿನ ಹಾದಿ ಹಿಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಕೊರೊನಾ ಸೋಂಕಿನ ಮೊದಲ ಅಲೆಯಲ್ಲಿ ಗಂಡ ಮತ್ತು ಅತ್ತೆಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಇದೀಗ ತಮ್ಮ ಮಗನ ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.


Provided by

40 ವರ್ಷ ವಯಸ್ಸಿನ ರೇಖಾ ಹಾಗೂ ಅವರ ಪುತ್ರ  22 ವರ್ಷ ವಯಸ್ಸಿನ ಮನೋಜ್ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ಸೋಮಶೆಟ್ಟಿಹಳ್ಳಿ ನಿವಾಸಿಗಳಾಗಿದ್ದಾರೆ.

ಪತಿಯ ಅಗಲಿಕೆಯ ನೋವನ್ನು ತಾಳಲಾರದೇ ತನ್ನ ಮಗನೊಂದಿಗೆ ತೆರಳಿ ರೈಲು ನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಖಾ ಅವರ ಪತಿ ಶಿವಕುಮಾರ್ ಅವರು ಸಾವನ್ನಪ್ಪಿ 9ನೇ ದಿನಕ್ಕೆ ಅವರ ತಾಯಿ ಕೂಡ ಸಾವನ್ನಪ್ಪಿದ್ದರು. ಕಳೆದ ಅಕ್ಟೋಬರ್  20ರಂದು ರೇಖಾ ಅವರ ಪತಿ ಕೊರೊನಾ ಸೋಂಕಿಗೆ ಬಯಾಗಿದ್ದಾರೆ. ಪತಿ ಸಾವನ್ನಪ್ಪಿ 6 ತಿಂಗಳಾದರೂ  ರೇಖಾ ಅವರಿಂದ ಈ ದುರಂತವನ್ನು ಮರೆಯಲು ಸಾಧ್ಯವಾಗಿರಲಿಲ್ಲ.

ಪತಿ ಹಾಗೂ ಅತ್ತೆಯನ್ನು ಕಳೆದುಕೊಂಡ ಇವರು ಪ್ರತಿನಿತ್ಯ ನೋವಿನಿಂದಲೇ ಬದುಕುತ್ತಿದ್ದರು. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಇವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ಹೇಳಲಾಗಿದೆ. ರೇಖಾ ಅವರ ಪತಿ ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ಕೂಡ ಆಗಿದ್ದರು. ಪುತ್ರ ಮನೋಜ್ ಹೆಸರಿನಲ್ಲಿ ಅಪಾರ್ಟ್ ಮೆಂಟ್ ಕೂಡ ಕಟ್ಟಿಸಿದ್ದರು ಎಂದು ಹೇಳಲಾಗಿದೆ.

ರೇಖಾ ಹಾಗೂ ಅವರ ಪುತ್ರ ಮನೋಜ್ ಗೆ ಮಾನಸಿಕ ಸಾಂತ್ವಾನ ಇರಲಿಲ್ಲ. ಹೀಗಾಗಿ ಅವರು ಖಿನ್ನತೆಗೆ ಜಾರಿದ್ದರು. ಸುಂದರ ಕುಟುಂಬವೊಂದರಲ್ಲಿ ಒಬ್ಬ ಸದಸ್ಯನನ್ನು ಕಳೆದುಕೊಂಡರೂ ಅದು ಯಾವ ರೀತಿಯ ನೋವನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಒಬ್ಬಂಟಿಯಾಗಿರುವುದು ಖಿನ್ನತೆಗೆ ಒಳಗಾಗಿರುವವರನ್ನು ಅಪಾಯದ ಕಡೆಗೆ ಸೆಳೆಯುತ್ತದೆ.

ಇತ್ತೀಚಿನ ಸುದ್ದಿ