ಕಿಂಡಿ ಆಣೆಕಟ್ಟಿನ ಸ್ಲ್ಯಾಬ್ ಮುರಿದು ಬಿದ್ದು 15 ಅಡಿ ಆಳಕ್ಕೆ ಬಿದ್ದ ದಂಪತಿ! - Mahanayaka
12:55 PM Thursday 8 - January 2026

ಕಿಂಡಿ ಆಣೆಕಟ್ಟಿನ ಸ್ಲ್ಯಾಬ್ ಮುರಿದು ಬಿದ್ದು 15 ಅಡಿ ಆಳಕ್ಕೆ ಬಿದ್ದ ದಂಪತಿ!

kindi anekattu
31/01/2024

ಸುಳ್ಯ:  ಸುಮಾರು 45 ವರ್ಷಗಳ ಹಿಂದಿನ ಕಿಂಡಿ ಆಣೆಕಟ್ಟಿನ ಸ್ಲ್ಯಾಬ್ ಮುರಿದು ಬಿದ್ದು ದಂಪತಿ ಗಾಯಗೊಂಡ ಘಟನೆ ಸುಳ್ಯದ ಅರಂತೋಡು ಗ್ರಾಮದ ದೇರಾಜೆ ಸಮೀಪ ಕಳುಬೈಲಿನಲ್ಲಿ ನಡೆದಿದೆ.

ಚಂದ್ರಪ್ರಕಾಶ್ ಹಾಗೂ ಅವರ ಪತ್ನಿ ವೇದಾವತಿ ಗಾಯಗೊಂಡ ದಂಪತಿಗಳಾಗಿದ್ದಾರೆ. ಕೆಲಸಕ್ಕೆ ಹೋಗಿ ಕಿಂಡಿ ಆಣೆಕಟ್ಟಿನ ಮೂಲಕ ವಾಪಸ್ ನಡೆದುಕೊಂಡು  ಬರುತ್ತಿದ್ದರು. ಈ ವೇಳೆ ಆಣೆಕಟ್ಟಿನ ಸ್ಲ್ಯಾಬ್ ಮುರಿದು ಬಿದ್ದಿದೆ. ಪರಿಣಾಮವಾಗಿ 15 ಅಡಿ ಆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ದಂಪತಿಯನ್ನು ಸ್ಥಳೀಯರು ರಕ್ಷಿಸಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಲ್ಲಿ ವೇದಾವತಿ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರ  ಕಾಲು ಮುರಿತಕ್ಕೊಳಗಾಗಿದೆ. ಚಂದ್ರಪ್ರಕಾಶ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇತ್ತೀಚಿನ ಸುದ್ದಿ