12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ಲಸಿಕಾ ಅಭಿಯಾನ - Mahanayaka

12ರಿಂದ 15 ವರ್ಷದ ಮಕ್ಕಳಿಗೆ ಇಂದಿನಿಂದ ಕೊವಿಡ್ ಲಸಿಕಾ ಅಭಿಯಾನ

covid 19 vaccine
16/03/2022

ದೆಹಲಿ: ದೇಶಾದ್ಯಂತ 12ರಿಂದ 15 ವರ್ಷದೊಳಗಿನ ಮಕ್ಕಳಿಗೆ ಇಂದಿನಿಂದ ಕೊವಿಡ್ ಲಸಿಕಾ ಪ್ರಕ್ರಿಯೆ ಆರಂಭವಾಗಲಿದೆ. ಸರ್ಕಾರ ಆರಂಭಿಸಿರುವ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಮಕ್ಕಳಿಗೆ ಲಸಿಕೆ ನೀಡಲಾಗುವುದು.


Provided by

ಕೊರ್ಬ್ವ್ಯಾಕ್ಸ್ (Corbevax) ತಯಾರಿಸಿರುವ ‘ಬಯೊಲಾಜಿಕಲ್ ಇ’ (Biological E) ಕಂಪನಿಯು ಲಸಿಕೆಯ ಬೆಲೆಯನ್ನು ಘೋಷಿಸಿದ ನಂತರ ಖಾಸಗಿ ಕೇಂದ್ರಗಳಲ್ಲಿಯೂ ಲಸಿಕೆ ಲಭ್ಯವಾಗಲಿದೆ.ಲಸಿಕೆಗೆ ಸಮಯವನ್ನೂ ಆನ್ ಲೈನ್ ಅಥವಾ ಲಸಿಕಾ ಕೇಂದ್ರಗಳಲ್ಲಿ ನಿಗದಿಪಡಿಸಿಕೊಳ್ಳಬಹುದಾಗಿದೆ. 12ರಿಂದ 15 ವಯೋಮಾನದ ಮಕ್ಕಳಿಗೆ ಪ್ರತ್ಯೇಕ ಅವಧಿಯಲ್ಲಿ ಲಸಿಕೆಗಳನ್ನು ನೀಡಲಾಗುವುದು. ಕೊರ್ಬಾವ್ಯಾಕ್ಸ್ ಬದಲು ಬೇರೊಂದು ಲಸಿಕೆ ಕೊಡುವ ಅಪಾಯ ತಪ್ಪಿಸುವುದು ಈ ನಿಯಮದ ಉದ್ದೇಶವಾಗಿದೆ.

ಲಸಿಕೆ ಕೊಡುವವರು ಮತ್ತು ಸಹಾಯಕರು ಮಕ್ಕಳ ವಯಸ್ಸು 12 ವರ್ಷದಾಟಿದೆ ಎಂಬುದನ್ನು ದೃಢಪಡಿಸಬೇಕಿದೆ. ಒಂದು ವೇಳೆ ವಯಸ್ಸು ದೃಢಪಡದಿದ್ದರೆ ಅಂಥ ಮಕ್ಕಳಿಗೆ ಲಸಿಕೆ ಕೊಡುವುದಿಲ್ಲ. ಕೊರ್ಬಾವ್ಯಾಕ್ಸ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ 28 ದಿನಗಳ ನಂತರ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕಿದೆ. 12ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ಕೊಡುವ ಸರ್ಕಾರದ ನಿರ್ಧಾರವು ಸರಿಯಾಗಿದೆ. ಇದು ನಮ್ಮ ಶಾಲೆಗಳನ್ನು ಮತ್ತಷ್ಟು ಸುರಕ್ಷಿತ ಸ್ಥಳಗಳಾಗಿಸುತ್ತವೆ ಎಂದು ಮಕ್ಕಳ ವೈದ್ಯ ಡಾ ಅರವಿಂದ್ ತನೇಜಾ ತಿಳಿಸಿದ್ದಾರೆ.

ಮಕ್ಕಳಿಗೆ ನೀಡುವ ಈ ಲಸಿಕೆ ಅತ್ಯಂತ ಸುರಕ್ಷಿತ ಮತ್ತು ಅಡ್ಡಪರಿಣಾಮಗಳೂ ಕಡಿಮೆ ಎಂದು ಅವರು ಹೇಳಿದ್ದಾರೆ. 15 ವರ್ಷ ವಯಸ್ಸು ದಾಟಿದ ಎಲ್ಲರನ್ನೂ ಕೊವಿಡ್-19 ಲಸಿಕೆ ಪಡೆಯಲು ಅರ್ಹತೆ ಹೊಂದಿರುವ ವಯೋಗುಂಪು ಎಂದು ಪರಿಗಣಿಸಲಾಗುತ್ತಿದೆ. ಈ ವಯೋಮಾನದವರ ಪೈಕಿ ಶೇ 95.5ರಷ್ಟು ಜನರಿಗೆ ಈಗಾಗಲೇ ಕನಿಷ್ಠ ಒಂದಾದರೂ ಲಸಿಕೆ ನೀಡಲಾಗಿದೆ. ಈ ವಯೋಮಾನದಲ್ಲಿರುವ ಹದಿಹರೆಯದವರ ಪೈಕಿ ಶೇ 80ರಷ್ಟು ಯುವಜನರು ಲಸಿಕೆ ಪಡೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೆಹಲಿಯ ಹೊರಗೆ ಮೊದಲ ಬಾರಿಗೆ AAP ಸಿಎಂ;  ಇಂದು ಪಂಜಾಬ್ ನಲ್ಲಿ ಭಗವಂತ್ ಮಾನ್ ಅಧಿಕಾರಕ್ಕೆ

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ: ನಿವೃತ್ತ ಎಸ್‌ ಐ ಪತ್ನಿ ಸಾವು

OTT ಗೆ ಸೆಲ್ಯೂಟ್;  ದುಲ್ಕರ್ ನಿರ್ಮಾಣ ಕಂಪನಿಯನ್ನು ಬ್ಯಾನ್ ಮಾಡಿದ ಫಿಯೋಕ್

ಹಿಜಾಬ್ ಧರಿಸಿದರೆ ಏನು ಸಮಸ್ಯೆ: ಅಸಾದುದ್ದೀನ್ ಓವೈಸಿ

ಹಿಜಾಬ್ ವಿವಾದ: ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ; ಸಿ.ಎಂ.ಇಬ್ರಾಹಿಂ

ಇತ್ತೀಚಿನ ಸುದ್ದಿ