ಕೊವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ 16 ಸಾವು | ಅನುಮಾನಕ್ಕೆ ಕಾರಣವಾದ ಅಗ್ನಿ ಅವಘಡಗಳು - Mahanayaka
11:15 PM Wednesday 15 - October 2025

ಕೊವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ 16 ಸಾವು | ಅನುಮಾನಕ್ಕೆ ಕಾರಣವಾದ ಅಗ್ನಿ ಅವಘಡಗಳು

covid hospital
01/05/2021

ಭರೂಚ್: ದೇಶದಲ್ಲಿ ಒಂದರ ಹಿಂದೊಂದರಂತೆ ಕೊವಿಡ್ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳು ಕಳೆದ ಹಲವು ದಿನಗಳಿಂದ ನಡೆಯುತ್ತಲೇ ಇದೆ. ಒಂದೆಡೆ ಕೊವಿಡ್ ನಿಂದ ಸಾವನ್ನಪ್ಪುತ್ತಿದ್ದರೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವಘಡಗಳಿಂದ ಜನರು ಸಾವನ್ನಪ್ಪುತ್ತಿದ್ದಾರೆ.


Provided by

 ಗುಜರಾತ್‌ ರಾಜ್ಯದ ಭರೂಚ್‌ ಜಿಲ್ಲೆಯ ಪಟೇಲ್ ವೆಲ್ಫೇರ್​ ಆಸ್ಪತ್ರೆಯ ಐಸಿಯು ವಿಭಾಗದ ಕೊವಿಡ್ ವಾರ್ಡ್ ನಲ್ಲಿ ಎಸಿ ಸ್ಫೋಟಗೊಂಡ ಪರಿಣಾಮ 16 ಮಂದಿ ಸಜೀವವಾಗಿ ದಹಿಸಿ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಯಲ್ಲಿ ಬೆಂಕಿ ಕಾಣುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದರು.

 ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮತ್ತು ಈ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನು ಸಮೀಪದ ಆಸ್ಪತ್ರೆಗಳಿಗೆ ಶಿಫ್ಟ್​ ಮಾಡಲಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅನಾಹುತ ಆಗಿದೆ ಎನ್ನಲಾಗಿದ್ದು, ತನಿಖೆ ಬಳಿಕ ಖಚಿತ ಮಾಹಿತಿ ಸಿಗಲಿದೆ.

ಒಂದರ ಹಿಂದೊಂದರಂತೆ ಕೊವಿಡ್ ಆಸ್ಪತ್ರೆಗಳಲ್ಲಿಯೇ ಇಂತಹ ದುರಂತಗಳು ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊವಿಡ್ ಆಸ್ಪತ್ರೆಗಳಲ್ಲಿಯೇ ಯಾಕೆ ಇಂತಹ ಅಗ್ನಿ ಅವಘಡಗಳು ನಡೆಯುತ್ತಿವೆ? ಇಡೀ ದೇಶಾದ್ಯಂತಹ ಇಂತಹ ಘಟನೆಗಳು ನಡೆಯುತ್ತಿವೆ. ಇದರ ಹಿಂದೇನಾದರೂ ರಹಸ್ಯ ಅಡಗಿದೆಯೇ ಎನ್ನುವ ಅನುಮಾನಗಳಿಗೂ ಈ ಘಟನಾವಳಿಗಳು ಕಾರಣವಾಗಿದೆ.

ಇತ್ತೀಚಿನ ಸುದ್ದಿ