ಕೊವಿಡ್ ಲಸಿಕೆ ಪಡೆದ ಬಳಿಕ ನಮ್ಮ ಮಗ ಮೃತಪಟ್ಟ | ಪೋಷಕರಿಂದ ಗಂಭೀರ ಆರೋಪ
ಹಾಸನ: ಕೊವಿಡ್ 19 ಲಸಿಕೆ ಹಾಕಿಸಿಕೊಂಡ ಬಳಿಕ ನಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿರುವ ಘಟನೆ ಹಾಸನದ ಅರಸೀಕರೆ ತಾಲೂಕಿನಲ್ಲಿ ನಡೆದಿದ್ದು, ಕೊವಿಡ್ ಲಸಿಕೆ ಪಡೆದ ಬಳಿಕ ಅಸ್ವಸ್ಥಗೊಂಡಿದ್ದ ನಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.
35 ವರ್ಷ ವಯಸ್ಸಿನ ವಸಂತ ನಾಯಕ್ ಮೃತಪಟ್ಟ ಯುವಕನಾಗಿದ್ದು, ಇವರು ಸೆ.4ರಂದು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡು ಅರಸೀಕೆರೆಗೆ ಬಂದಿದ್ದರು ಎನ್ನಲಾಗಿದೆ. ಆ ಬಳಿಕ ಅವರು ಅಸ್ವಸ್ಥರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ನಮ್ಮ ಮಗನ ಸಾವಿಗೆ ಕೊವಿಡ್ ವ್ಯಾಕ್ಸಿನ್ ಕಾರಣ ಎಂದು ವಸಂತ್ ನ ಪೋಷಕರು ಹೇಳುತ್ತಿದ್ದಾರೆ. ಆದರೆ, ವೈದ್ಯರು ಇದನ್ನು ನಿರಾಕರಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮೃತರ ಪೋಷಕರು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್, ಜಿಲ್ಲೆಯಲ್ಲಿ 12 ಲಕ್ಷಕ್ಕೂ ಅಧಿಕ ಜನರಿಗೆ ಕೊವಿಡ್ ಲಸಿಕೆ ಹಾಕಲಾಗಿದೆ. ಯಾರಿಗೆ ಕೂಡ ಅಡ್ಡಪರಿಣಾಮ ಉಂಟಾಗಿಲ್ಲ. ಇದೀಗ ನಡೆದಿರುವ ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಸಾವು ಹೇಗೆ ಸಂಭವಿಸಿದೆ ಎನ್ನುವುದನ್ನು ಹೇಳಬಹುದು ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
ಪೆರಿಯಾರ್ ಜನ್ಮದಿನವನ್ನು ಸಾಮಾಜಿಕ ನ್ಯಾಯದಿನವನ್ನಾಗಿ ಆಚರಿಸಲು ನಿರ್ಧಾರ | ಎಂ.ಕೆ.ಸ್ಟ್ಯಾಲಿನ್
ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಧಾರವಾಡ, ಕಲಬುರ್ಗಿ ಅತಂತ್ರ
ಗಣೇಶನ ಹಬ್ಬದಂದು ಗಬ್ಬೆದ್ದು ನಾರಲಿದೆ ಬೆಂಗಳೂರು! | ಸ್ವಚ್ಛತಾ ಸೈನಿಕರು ಕೊಟ್ರು ನೋಡಿ ಶಾಕ್!
ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್
ಐದು ರೂಪಾಯಿ ನಾಣ್ಯ ನುಂಗಿ 4 ವರ್ಷದ ಬಾಲಕಿ ಸಾವು!
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ
ಮೂವರು ವಿದ್ಯಾರ್ಥಿನಿಯರಿಗೆ, ನೀವು ಧರಿಸಿರುವ ಉಡುಪು ಕಳಚಿ ಎಂದ 50 ವರ್ಷದ ಪ್ರಾಂಶುಪಾಲ!




























