“ಸರ್ಕಾರ ಇರುವಾಗ ಕೊವಿಡ್ ನಿಯಂತ್ರಣಕ್ಕೆ ರಾಜ್ಯಪಾಲರಿಂದ ಸಭೆ ಯಾಕೆ?” - Mahanayaka

“ಸರ್ಕಾರ ಇರುವಾಗ ಕೊವಿಡ್ ನಿಯಂತ್ರಣಕ್ಕೆ ರಾಜ್ಯಪಾಲರಿಂದ ಸಭೆ ಯಾಕೆ?”

eshwarappa
20/04/2021


Provided by

ಶಿವಮೊಗ್ಗ:  ಚುನಾಯಿತ ಪ್ರತಿನಿಧಿಗಳ ಸರ್ಕಾರ ಇರುವ ಸಂದರ್ಭದಲ್ಲಿ ಕೊವಿಡ್ ನಿಯಂತ್ರಣಕ್ಕೆ ರಾಜ್ಯಪಾಲರು ನೇರವಾಗಿ ಬಂದಿರುವುದು ಆಶ್ಚರ್ಯಕರವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಈಶ್ವರಪ್ಪ,  ರಾಜ್ಯಪಾಲರ ಸಭೆಯು ಹೊಸ ವ್ಯವಸ್ಥೆಯೊಂದರ ಹುಟ್ಟಿಗೆ ಕಾರಣವಾಗುತ್ತಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜ್ಯಪಾಲರು ಸಿಎಂ, ವಿಪಕ್ಷ ನಾಯಕರ ಸಭೆ ಕರೆದಿರುವುದು ಉತ್ತಮವಾಗಿದೆ. ಆದರೆ ಇದು ರಾಜ್ಯದಲ್ಲಿ ಹೊಸ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗುತ್ತದೆ ಎನ್ನುವುದು ನನ್ನ ಅನುಮಾನ ಎಂದು ಈಶ್ವರಪ್ಪ ಹೇಳಿದರು.

ಕೋವಿಡ್ ನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಪಾಲರು ಸಭೆ ಕರೆದಿರಬಹುದು.ಚುನಾಯಿತ ಪ್ರತಿನಿಧಿಗಳು ಜಾಗೃತಿ ಅಗಬೇಕು ಅನ್ನುವ ಉದ್ದೇಶದಿಂದ ಕರೆದಿರಬಹುದು. ಅವರು ಏನೇ ಮಹತ್ವದ ತೀರ್ಮಾನ ಕೈಗೊಂಡರೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಇತ್ತೀಚಿನ ಸುದ್ದಿ