ಭಾರತದ 100 ಸ್ವಯಂ ಸೇವಕರ ಮೇಲೆ ಕೊವಿಡ್ ಲಸಿಕೆ ಪ್ರಯೋಗ - Mahanayaka
1:44 PM Thursday 16 - October 2025

ಭಾರತದ 100 ಸ್ವಯಂ ಸೇವಕರ ಮೇಲೆ ಕೊವಿಡ್ ಲಸಿಕೆ ಪ್ರಯೋಗ

23/10/2020

ನವದೆಹಲಿ: ರಷ್ಯಾದಲ್ಲಿ ಅಭಿವೃದ್ಧಿಪಡಿಸಿರುವ ಕೊವಿಡ್ 19 ಪ್ರಾಯೋಗಿಕ ಲಸಿಕೆ ‘ಸ್ಪುಟ್ನಿಕ್‌ ವಿ’ನ್ನು ಭಾರತದ 100 ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ವರದಿಯಾಗಿದೆ.


Provided by

ಈ ವಿಚಾರವನ್ನು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಹೇಳಿದೆ ಎಂದು ವರದಿಯಾಗಿದೆ. ಭಾರತದಲ್ಲಿ ‘ಸ್ಪುಟ್ನಿಕ್‌-ವಿ’ ಲಸಿಕೆ ಮಾರಾಟ ಹಾಗೂ ಕ್ಲಿನಿಕಲ್‌ ಟ್ರಯಲ್ಸ್‌ ನಡೆಸಲು ರಷ್ಯಾದ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌  ಹೈದರಾಬಾದ್‌ನ ರೆಡ್ಡೀಸ್‌ ಲ್ಯಾಬೊರೇಟರಿ ಜೊತೆ ಒಪ್ಪಂದ ಮಾಡಿಕೊಂಡಿತ್ತು.

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡುವುದಕ್ಕೆ ಡಿಜಿಸಿಐಯಿಂದ ಅನುಮತಿ ಲಭಿಸಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ