ಮೇವು ಅರಸಿ ಬಂದು 50 ಅಡಿ ಆಳದ ಬಾವಿಗೆ ಬಿದ್ದ ಹಸು - Mahanayaka
4:18 AM Wednesday 24 - December 2025

ಮೇವು ಅರಸಿ ಬಂದು 50 ಅಡಿ ಆಳದ ಬಾವಿಗೆ ಬಿದ್ದ ಹಸು

cow
25/05/2023

ಮೇವು ಅರಸಿ ಬಂದು 50 ಅಡಿ ಆಳದ ಬಾವಿಗೆ ಬಿದ್ದ   ಜಾನುವಾರನ್ನು ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿ ವರ್ಗದವರು ರಕ್ಷಣೆ ಮಾಡಿದರು

ಹನೂರು ಪಟ್ಟಣದ  ದೇವಂಗ ಪೇಟೆ ಹೊರವಲಯದ ಖಾಸಗಿ ಜಮೀನೊಂದರಲ್ಲಿ  ರೈತ ಪವನ್ ಎಂಬವರಿಗೆ ಸೇರಿದ ಮೇಯಲು  ಬಿಟ್ಟಿದ್ದ  ಹಸು  ತೆರೆದ ಬಾವಿ ಬಳಿ ಮೇಯಲು ಹೋದ ಸಂದರ್ಭದಲ್ಲಿ 50 ಅಡಿ ಆಳದ ನೀರು ತುಂಬಿರುವ ಬಾವಿಗೆ ಬಿದ್ದಿದೆ ಇದನ್ನು ಕಂಡ ರೈತರು ತಕ್ಷಣ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪಟ್ಟಣದ ಅಗ್ನಿಶಾಮಕ ದಳದ ಅಧಿಕಾರಿ ಪ್ರಶಾಂತ್ ನಾಯಕ್ ಹಾಗೂ ಸಿಬ್ಬಂದಿಗಳಾದ ಆನಂದ್ ಪಿರಿಯ ನಾಯಗನ್ ಪ್ರವೀಣ್ ಶೇಖರ್ ಹರ್ಷ ನಾಯಕ್ ಮತ್ತು ಅಶೋಕ ರೈತರು ಬಾವಿಗೆ ಬಿದ್ದಿದ್ದ ಹಸುವನ್ನು ಟ್ರ್ಯಾಕ್ಟರ್ ಮೂಲಕ ಮೇಲೆತ್ತಿ ರಕ್ಷಣೆ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ