ಒಡೆದ ಕೆಎಂಎಫ್ ಹಾಲು, ಸಾರ್ವಜನಿಕರ ಪರದಾಟ - Mahanayaka

ಒಡೆದ ಕೆಎಂಎಫ್ ಹಾಲು, ಸಾರ್ವಜನಿಕರ ಪರದಾಟ

milk
01/04/2023

ಕೊಟ್ಟಿಗೆಹಾರ: ತಾಂತ್ರಿಕ ದೋಶದಿಂದ ಕೆಎಂಎಫ್ ನಿಂದ ಮೂಡಿಗೆರೆ ತಾಲೂಕಿನ ವಿವಿಧೆಡೆ ಸರಬರಾಜು ಆಗಿದ್ದ ಸಾವಿರಾರು ಲೀಟರ್ ಹಾಲು ವಾಪಾಸಾಗಿದ್ದು, ಸಾರ್ವಜನಿಕರು ಪರದಾಡುವಂತಾಯಿತು.

ಶುಕ್ರವಾರ ಬೆಳಿಗ್ಗೆ ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಕಳಸ, ಮಾಗುಂಡಿ, ನಿಡುವಾಳೆ ಸೇರಿದಂತೆ ಇನ್ನೀತರ ಕಡೆಗೆ ಶುಕ್ರವಾರ ಸರಬರಾಜು ಆಗಿದ್ದ ನಂದಿನಿ ಹಾಲು ಒಡೆದು ಹೋದ ಪರಿಣಾಮ ಸ್ಥಳೀಯರು ಪರದಾಡುವಂತಾಯಿತು.

ಯಂತ್ರದಲ್ಲಿ ಉಷ್ಣಾಂಶ ಹೆಚ್ಚಾದ ಕಾರಣ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದು ಕೆಎಂಎಫ್ ಕ್ವಾಲಿಟಿ ಅಧಿಕಾರಿ ನಟರಾಜ್ ಮಾಧ್ಯಮಗಳಿಗೆ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ