ಬಿ.ಎಲ್.ಸಂತೋಷ್ ಬಗ್ಗೆ ಸುಳ್ಳು ವರದಿ ಸೃಷ್ಟಿ ಆರೋಪ: ಓರ್ವನ ಬಂಧನ, ಹಲವರ ವಿರುದ್ಧ ದೂರು ದಾಖಲು - Mahanayaka

ಬಿ.ಎಲ್.ಸಂತೋಷ್ ಬಗ್ಗೆ ಸುಳ್ಳು ವರದಿ ಸೃಷ್ಟಿ ಆರೋಪ: ಓರ್ವನ ಬಂಧನ, ಹಲವರ ವಿರುದ್ಧ ದೂರು ದಾಖಲು

b l santhosh
07/05/2023


Provided by

ಬೆಂಗಳೂರು: ಬಿ.ಎಲ್.ಸಂತೋಷ್ ಅವರು ಲಿಂಗಾಯತರ ವಿರುದ್ಧ ಹೇಳಿಕೆ ನೀಡಿರುವ ರೀತಿಯಲ್ಲಿ ಸುದ್ದಿ ಪತ್ರಿಕಾ ವರದಿ ಸೃಷ್ಟಿಸಿದ ಆರೋಪಿಯನ್ನು  ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.

ದಿಲೀಪ್ ಗೌಡ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಬೈರಪ್ಪ ಹರೀಶ್ ಕುಮಾರ್, ಹೇಮಂತ್ ಕುಮಾರ್, ದಿನೇಶ್ ಅಮಿನ್ ಮಟ್ಟು, ಬಿಂದು ಗೌಡ, ದಿಲೀಪ್ ಗೌಡ ವಿರುದ್ಧ ಬಿಜೆಪಿ ಕಾನೂನು ಘಟಕದ ಯಶವಂತ ಅವರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿ ಹಿಂದುತ್ವದ ಆಧಾರದ ಮೇಲೆ ನಂಬಿಕೆ ಇಟ್ಟಿರುವುದೇ ಹೊರತು ಯಾವುದೇ ನಾಯಕನ ಜಾತಿಯ ಮೇಲಲ್ಲ,  ಕಾರ್ಯಕರ್ತರು ನಂಬಿಕೆ ಇಡಬೇಕಾಗಿರುವುದು ಹಿಂದುತ್ವದ ಮೇಲೆ ಯಾವುದೋ ವ್ಯಕ್ತಿಯ ಮೇಲಲ್ಲ ಎಂದು ಹೇಳಿರುವುದಾಗಿ ಈ ನಕಲಿ ಎನ್ನಲಾಗಿರುವ ವರದಿಯಲ್ಲಿದೆ. ರಾಜ್ಯದಲ್ಲಿ ಲಿಂಗಾಯತರ ಮತಗಳು ಕೈ ತಪ್ಪಿದರೆ ಬಿಜೆಪಿಗೆ ದೊಡ್ಡ ಹೊಡೆತ ಎಂದು ಸಭೆಯಲ್ಲಿದ್ದವರು ಅಭಿಪ್ರಾಯಪಟ್ಟಾಗ, ಸಿಡಿಮಿಡಿಗೊಂಡ ಬಿ.ಎಲ್.ಸಂತೋಷ್, ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಹೇಳಿದ್ದಾಗಿ ವರದಿ ಸೃಷ್ಟಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ