ಬಾಗಲಕೋಟೆಯ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವು ನೀಡಿದ ಕ್ರಿಕೆಟಿಗ ರಿಷಭ್ ಪಂತ್

ಬಾಗಲಕೋಟೆ: ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟಿಗ ರಿಷಭ್ ಪಂತ್ ನೆರವು ನೀಡಿದ್ದಾರೆ. ಬಾಗಲಕೋಟೆ ಮೂಲದ ಬಡ ವಿದ್ಯಾರ್ಥಿನಿ ಬಿಸಿಎ ತರಗತಿ ಪ್ರವೇಶ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸಿದ್ದಳು. ಇದೀಗ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ರಿಷಭ್ ಪಂತ್ ನೆರವು ನೀಡಿದ್ದಾರೆ.
ಜ್ಯೋತಿ ಕಣಬೂರ್ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ವಿದ್ಯಾರ್ಥಿನಿಯಾಗಿದ್ದಾಳೆ. ಜಮಖಂಡಿಯಲ್ಲಿನ ಬಿಎಲ್ ಡಿ ಕಾಲೇಜ್ ನಲ್ಲಿ ಪ್ರಸ್ತುತ ಬಿಸಿಎ ಪ್ರಥಮ ಸೆಮಿಸ್ಟರ್ ನಲ್ಲಿ ಓದುತ್ತಿದ್ದಾರೆ. ಜ್ಯೋತಿ ಕಣಬೂರ್ ದ್ವಿತೀಯ ಪಿಯುಸಿ ಕಾಮರ್ಸ್ ನಲ್ಲಿ ಶೇ 85 ರಷ್ಟು ಅಂಕ ಪಡೆದಿದ್ದರು. ಇವರಿಗೆ ಬಿಸಿಎ ಓದಬೇಕು ಎಂಬ ಆಸೆ ಇತ್ತು. ಆದರೆ, ಬಿಸಿಎ ಕಾಲೇಜಿಗೆ ದಾಖಲಾಗಲು ಹಣ ಇಲ್ಲದೆ ಪರದಾಡುತ್ತಿದ್ದರು.
ಈ ವಿಷಯ ಅದೇ ಊರಿನ ಅನಿಲ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿದೆ. ಈ ಸಂದರ್ಭದಲ್ಲಿ ಅನಿಲ ಹುಣಸೀಕಟ್ಟಿ ಅವರ ಸ್ನೇಹಿತರು ಐಪಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಅನಿಲ ಅವರು ವಿಷಯ ತಿಳಿಸಿದ್ದಾರೆ. ಅನಿಲ್ ಅವರ ಸ್ನೇಹಿತರು ಹಣದ ಅವ್ಯಶಕತೆ ಇರುವ ವಿಚಾರವನ್ನು ರಿಷಭ್ ಪಂತ್ ಅವರ ಗಮನಕ್ಕೆ ತಂದಿದ್ದಾರೆ. ಆಗ, ರಿಷಭ್ ಪಂತ್ ಅವರು ಜ್ಯೋತಿಯ ಬಿಸಿಎ ವ್ಯಾಸಂಗಕ್ಕೆ 40 ಸಾವಿರ ರೂ. ನೆರವು ನೀಡುವ ಮೂಲಕ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD