ಉತ್ತರ ಪ್ರದೇಶ: ಕ್ರಿಮಿನಲ್ ಗಳಿಗೆ ಎನ್ ಕೌಂಟರ್ ಭೀತಿ, ಜನರಿಗೆ ಬುಲ್ಡೋಜರ್ ಭೀತಿ - Mahanayaka

ಉತ್ತರ ಪ್ರದೇಶ: ಕ್ರಿಮಿನಲ್ ಗಳಿಗೆ ಎನ್ ಕೌಂಟರ್ ಭೀತಿ, ಜನರಿಗೆ ಬುಲ್ಡೋಜರ್ ಭೀತಿ

yogi adithyanath
28/03/2022


Provided by

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2.0 ಆಡಳಿತದಲ್ಲಿ  ಎನ್‌ ಕೌಂಟರ್‌ ಮತ್ತು ಮನೆ ಬುಲ್ಡೋಜರ್‌ ನಿಂದ  ನೆಲಸಮ ಮಾಡುತ್ತಿರುವ ಭಯದಿಂದ ಪೊಲೀಸ್ ಠಾಣೆಗಳಲ್ಲಿ  ಅಪರಾಧಿಗಳು ಸಾಮೂಹಿಕವಾಗಿ ಶರಣಾಗುತ್ತಿದ್ದಾರೆ.

ವಾಂಟೆಡ್ ಕ್ರಿಮಿನಲ್  ಗೌತಮ್ ಸಿಂಗ್ ಮೊದಲು ಶರಣಾದ ಆರೋಪಿ. ಗೌತಮ್ ಅಪಹರಣ ಪ್ರಕರಣದ ಆರೋಪಿ  ಈತ  ಛಾಪ್ಯಾ ಪೊಲೀಸ್ ಠಾಣೆಯಲ್ಲಿ ನಂತರ, 23 ಅಪರಾಧಿಗಳು ಸಹರಾನ್‌ಪುರದ ಚಿಲ್ಕಾನಾ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

ನಂತರ, ನಾಲ್ವರು ಮದ್ಯ ಕಳ್ಳಸಾಗಣೆದಾರರು ದೇವಬಂದ್‌ ಠಾಣೆಯಲ್ಲಿ  ಇನ್ನು ಮುಂದೆ ಯಾವುದೇ ಅಪರಾಧಗಳನ್ನು ಮಾಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಗೋಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 18 ಆರೋಪಿಗಳು ಠಾಣಾಭವನ ಮತ್ತು ಗರ್ಹಿಪುಕ್ತ ಪೊಲೀಸ್ ಠಾಣೆಗಳಲ್ಲಿ ಶರಣಾಗಿದ್ದಾರೆ.  ಉತ್ತರಪ್ರದೇಶದ ಕುಖ್ಯಾತ ಕ್ರಿಮಿನಲ್ ಹಿಮಾಂಶು ಅವರನ್ನು ಕೂಡ ಬಂಧಿಸಲಾಗಿದೆ.  ಶರಣಾಗುವಾಗ ಗುಂಡು ಹಾರಿಸಬೇಡಿ ಎಂದು ಪೊಲೀಸರಲ್ಲಿ  ಮನವಿ ಮಾಡಿದರು .

ಯೋಗಿ ಆದಿತ್ಯನಾಥ್ 2.0 ಆಡಳಿತದಲ್ಲಿಇಲ್ಲಿಯವರೆಗೆ 50 ಅಪರಾಧಿಗಳು ಶರಣಾಗಿದ್ದಾರೆ ಇಬ್ಬರು ಆರೋಪಿಗಳ ಶೂಟೌಟ್ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಂಗಳೂರು ವಿವಿ: ಕುಲಪತಿ ನೇಮಕ ರದ್ದಾದರೂ, ಮುಗಿಯದ ಗೊಂದಲ!

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಅಧ್ಯಕ್ಷರಾಗಿ ಕೆ.ಎಂ.ಫಯಾಝ್ ಆಯ್ಕೆ

ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್

ಕಾಡಾನೆ ದಾಳಿ: ಮಹಿಳೆ ಸಾವು; ಓರ್ವ ಗಂಭೀರ

ಸಂಚಾರಿ ವಿಜಯ್ ಅವರ ಮುಂದಿನ ಚಿತ್ರವನ್ನು ಎಲ್ಲರೂ ವೀಕ್ಷಿಸಿ: ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಕರೆ

ಇತ್ತೀಚಿನ ಸುದ್ದಿ