ಕ್ರೈಸ್ತ ಧರ್ಮ ಗುರುವಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ - Mahanayaka
3:45 AM Thursday 16 - October 2025

ಕ್ರೈಸ್ತ ಧರ್ಮ ಗುರುವಿನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ

01/11/2020

ಫ್ರಾನ್ಸ್: ಕ್ರೈಸ್ತ ಧರ್ಮಗುರು ಅವರ ಮೇಲೆ ದುಷ್ಕರ್ಮಿಯೋರ್ವ ಎರಡು ಬಾರಿ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಫ್ರಾನ್ಸ್ ನ ಲಿಯೋನ್ ನಗರದಲ್ಲಿ ನಡೆದಿದ್ದು, ಧರ್ಮಗುರುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.



Provided by

ಧರ್ಮಗುರು ಚರ್ಚ್ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೋರ್ವ ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಗುಂಡು ತಗಲಿದ ಪರಿಣಾಮ ಧರ್ಮಗುರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.


ಫ್ರಾನ್ಸ್ ನ ಇನ್ನೊಂದು ನಗರದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಚೂರಿ ಇರಿತ ನಡೆದಿತ್ತು. ಇದರಲ್ಲಿ 3 ಜನರು ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ.


ಇತ್ತೀಚಿನ ಸುದ್ದಿ