ಕ್ರೈಸ್ತ ಸನ್ಯಾಸಿನಿಯ ಮೃತದೇಹ ಬಾವಿಯಲ್ಲಿ ಪತ್ತೆ! - Mahanayaka
11:58 AM Wednesday 10 - December 2025

ಕ್ರೈಸ್ತ ಸನ್ಯಾಸಿನಿಯ ಮೃತದೇಹ ಬಾವಿಯಲ್ಲಿ ಪತ್ತೆ!

maabel joseph
16/04/2021

ಕೊಲ್ಲಂ: ಕ್ರೈಸ್ತ ಸನ್ಯಾಸಿನಿಯೋರ್ವರ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಹೇಳಲಾಗಿದೆ. ಸಾವಿಗೀಡಾಗಿರುವ ಕ್ರೈಸ್ತ ಸನ್ಯಾಸಿನಿ ಬರೆದಿರುವುದು ಎನ್ನಲಾಗಿರುವ ಡೆತ್ ನೋಟ್ ವೊಂದು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕರುಣಗಪ್ಪಳ್ಳಿ ಪಾವುಂಬಾ ಮೂಲದ 42 ವರ್ಷ ವಯಸ್ಸಿನ ಮಾಬೆಲ್ ಜೋಸೆಫ್ ಮೃತ ಸನ್ಯಾಸಿನಿಯಾಗಿದ್ದಾರೆ. ಇವರ ಮೃತದೇಹವು ಕುರೀಫುಳದಲ್ಲಿರುವ ಕಾನ್ವೆಂಟ್ ನ ಪಕ್ಕದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ.

ದೇಹದಲ್ಲಿರುವ ಅಲರ್ಜಿ ಸಮಸ್ಯೆಯಿಂದಾಗಿ ನಾನು ನನ್ನ ಜೀವನವನ್ನು ಕೊನೆಗಾಣಿಸುತ್ತಿದ್ದೇನೆ ಎಂದು ಸನ್ಯಾಸಿನಿ ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಅಲ್ಲದೇ ನನ್ನ ಮೃತದೇಹವು ಇಲ್ಲಿನ ಬಾವಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

6 ತಿಂಗಳ ಹಿಂದೆಯಷ್ಟೇ ಮಾಬೆಲ್ ಜೋಸೆಫ್ ಕಾನ್ವೆಂಟ್ ಗೆ ಬಂದಿದ್ದರು.  ಬೆಳಗ್ಗೆ ಪ್ರಾರ್ಥನೆಗೆ ಹಾಜರಾಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಅವರ ಜೊತೆಗಿದ್ದ ಸನ್ಯಾಸಿನಿ ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ