ಕ್ರೂಸ್ ಡ್ರಗ್ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್
ಕ್ರೂಸ್ ಡ್ರಗ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ರಿಲೀಫ್ ಆಗಿದ್ದಾರೆ. ಎನ್ ಸಿಬಿ ಚಾರ್ಜ್‌ಶೀಟ್ ನಲ್ಲಿ ಆರ್ಯನ್ ಖಾನ್ ಹೆಸರಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ ಹೊಸ ಆರೋಪಪಟ್ಟಿ ಸಲ್ಲಿಸಿದೆ.
ಆರ್ಯನ್ ಸೇರಿದಂತೆ ಆರು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಎನ್‌ಸಿಬಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ ಅರ್ಬಾಸ್ ಮರ್ಚೆಂಟ್ ಮತ್ತು ಮುನ್- ಮುನ್ ಧಮೇಚಾ ವಿರುದ್ಧದ ಪ್ರಕರಣ ಉಳಿಯುತ್ತದೆ.
ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ಐಷಾರಾಮಿ ಹಡಗಿನಲ್ಲಿ ಮಾದಕ ವ್ಯಸನದ ಪಾರ್ಟಿಗೆ ಸಂಬಂಧಿಸಿದಂತೆ ಆರ್ಯನ್ ಸೇರಿದಂತೆ 20 ಜನರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು. ಮೂರು ವಾರಗಳ ನಂತರ ಆರ್ಯನ್ ಜಾಮೀನಿನ ಮೇಲೆ ಬಿಡುಗಡೆಯಾದರು. ಹಡಗಿನಿಂದ ಕೊಕೇನ್, ಹಶಿಶ್ ಮತ್ತು ಎಂಡಿಎಂಎ ಸೇರಿದಂತೆ ಹಲವು ಅಕ್ರಮ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಾಮೂಹಿಕ ಅತ್ಯಾಚಾರದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ
ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು
ಮತ್ತೋರ್ವ ಬಂಗಾಳಿ ನಟಿ ಮೃತದೇಹ ಅಪಾರ್ಟ್‌ಮೆಂಟ್ ನಲ್ಲಿ ಪತ್ತೆ
ಟಿಪ್ಪು ಅರಮನೆಯನ್ನು ನಿರ್ಮಿಸಿದ್ದು ದೇವಾಲಯದ ಭೂಮಿಯಲ್ಲಿ: ಹಿಂದೂ ಜನಜಾಗೃತಿ ಸಮಿತಿ
ಒಂದು ವರ್ಷದ ಮಗುವನ್ನು ಚರ್ಚ್ ನಲ್ಲಿ ಮಲಗಿಸಿ ಪರಾರಿಯಾದ ಪೋಷಕರು!




























