ದರ್ಶನ್ ಕೈನಲ್ಲಿದ್ದ ಕಪ್ ನಲ್ಲಿದ್ದದ್ದು ಕಾಫಿ ಅಲ್ಲ: ವಿಚಾರಣೆ ವೇಳೆ ದರ್ಶನ್ ಏನಂದ್ರು? - Mahanayaka

ದರ್ಶನ್ ಕೈನಲ್ಲಿದ್ದ ಕಪ್ ನಲ್ಲಿದ್ದದ್ದು ಕಾಫಿ ಅಲ್ಲ: ವಿಚಾರಣೆ ವೇಳೆ ದರ್ಶನ್ ಏನಂದ್ರು?

darshan
28/08/2024


Provided by

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಮಾಹಿತಿಗಳು ಬಹಿರಂಗಗೊಂಡಿವೆ.

ವರದಿಗಳ ಪ್ರಕಾರ, ತನಿಖಾ ತಂಡ ದರ್ಶನ್ ಫೋಟೋ ವೈರಲ್ ಬಗ್ಗೆ ಮಾಹಿತಿ ಕಲೆ ಹಾಕಿದೆ. ನಟ ದರ್ಶನ್ ತಾನಾಗಿಯೇ ಹೋಗಿ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ಕುಳಿತಿರಲಿಲ್ಲ. ದರ್ಶನ್ ವಾಕಿಂಗ್ ಮಾಡುತ್ತಿದ್ದ ವೇಳೆ ನಾಗನೇ ಕರೆದಿದ್ದ ಎನ್ನಲಾಗಿದೆ.

ನಾಗ ಕಾಫಿ ತೆಗೆದುಕೊಳ್ಳಲು ಹೇಳಿದ್ದಾನೆ. ಈ ವೇಳೆ ನನಗೆ ಕಾಫಿ ಬೇಡ, ಬಿಸಿ ನೀರು ಸಾಕು ಎಂದು ದರ್ಶನ್ ಹೇಳಿದ್ರಂತೆ, ಹಾಗಾಗಿ ಮಗ್ ನಲ್ಲಿ ಬಿಸಿನೀರು ತರಿಸಿಕೊಡಲಾಗಿತ್ತಂತೆ. ನಾಗನ ಜೊತೆಗೆ ಸುಮ್ಮನೆ ಕುಳಿತಿದ್ದಾಗಿ ನಟ ದರ್ಶನ್ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ದರ್ಶನ್ ಗೆ ರಾಜಾತಿಥ್ಯ ನೀಡಿರುವ ವಿಚಾರವಾಗಿ ಇಂದಿನಿಂದ ಪೊಲೀಸರು ಮತ್ತೆ ತನಿಖೆ ನಡೆಸಲಿದ್ದಾರೆ. ಬೇಗೂರು ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಲಾನ್ ನಲ್ಲಿ ನಟ ದರ್ಶನ್ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಜೈಲಿನಲ್ಲಿ ಸಿಗರೇಟ್ ನೀಡಿರುವುದು ನಾಗ ಅಂತ ನಟ ದರ್ಶನ್ ಮಾಹಿತಿ ನೀಡಿದ್ದಾರೆನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ