ದೈವ ಬಬ್ಬುಸ್ವಾಮಿ ವ್ಯವಸ್ಥೆಯ ವಿರುದ್ಧ ಬಂಡೆದ್ದ ಜನಪರ ಹೋರಾಟಗಾರ: ಜಯನ್ ಮಲ್ಪೆ - Mahanayaka
6:45 PM Thursday 23 - October 2025

ದೈವ ಬಬ್ಬುಸ್ವಾಮಿ ವ್ಯವಸ್ಥೆಯ ವಿರುದ್ಧ ಬಂಡೆದ್ದ ಜನಪರ ಹೋರಾಟಗಾರ: ಜಯನ್ ಮಲ್ಪೆ

babbu swami
23/10/2022

ಮಲ್ಪೆ: ಕರಾವಳಿಯನ್ನು ದೈವಗಳ ನಾಡು ಎನ್ನುತ್ತಾರೆ. ಈ ದೈವಗಳ ರಾಜ ದಲಿತರ ಆರಾದ್ಯದೈವ ಬಬ್ಬುಸ್ವಾಮಿ ಎನ್ನುತ್ತಾರೆ. ಆದರೆ ಈ ಬಬ್ಬುಸ್ವಾಮಿ ವ್ಯವಸ್ಥೆಯ ವಿರುದ್ಧ ಬಂಡೆದ್ದ ಜನಪರ ಹೋರಾಟಗಾರನೂ ಹೌದು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಭಾನುವಾರ ಬಡನಿಡಿಯೂರು ಬಬ್ಬುಸ್ವಾಮಿ ವಠಾರದಲ್ಲಿ ಆಯೋಜಿಸಿದ ಕದಿಕೆ ಅಂಬೇಡ್ಕರ್ ಯುವಸೇನೆಯ ಗ್ರಾಮ ಶಾಖೆ ಮತ್ತು ದಲಿತ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಬಬ್ಬುಸ್ವಾಮಿಯನ್ನು ಯಾವುದೇ ಮನೆಯ ದೈವವಾಗಿ ಪೂಜಿಸುತ್ತಿಲ್ಲ. ದಲಿತರು ಸಂಘಟಿತರಾಗಿ ಗ್ರಾಮಗಳಲ್ಲಿ ಆತನನ್ನು ಪೂಜಿಸುತ್ತಾರೆ. ಬಬ್ಬುವಿನ ಸಾಮರ್ಥ್ಯವನ್ನು ಎದುರಿಸಲಾಗದ ಆಗಿನ ಬಂಡವಾಳಶಾಹಿಗಳು ಮತ್ತು ಪುರೋಹಿತಶಾಹಿಗಳು ಆತನನ್ನು ಸಮಾಧಿ ಮಾಡಿದ್ದಾರೆ ಎಂದು ಆರೋಪಿಸಿದ ಜಯನ್ ಮಲ್ಪೆ, ಬಬ್ಬುವಿನ ಜೀವನ ಚರಿತ್ರೆಯ ಅಧ್ಯಯನ ಅಗತ್ಯವಿದೆ. ಯಾರು ಅವನ ಸಾವಿಗೆ ಸಂಚು ರೂಪಿಸಿದರೋ ಅವರನ್ನೇ ಇಟ್ಟುಕೊಂಡು ಆರಾಧಿಸುವುದು ಈ ನಾಡಿನ ದುರಂತ ಎಂದಿರುವ ಅವರು, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನದ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದರು.

ಮುಖ್ಯ ಭಾಷಣಗಾರರಾಗಿ ದಸಂಸ ನಾಯಕ ವಕೀಲ ಮಂಜುನಾಥ ಗಿಳಿಯಾರು ಮಾತನಾಡಿ, ಇತಿಹಾಸಕಾರರ ತ್ಯಾಗ ಮತ್ತು ಶ್ರಮವನ್ನು ನೆನಪಿಸಿಕೊಂಡು ದಲಿತ ಸಮಾಜವನ್ನು ಕಟ್ಟಬೇಕಿದೆ. ದೇಶದಲ್ಲಿ ನಡೆಯುವ ಯಾವುದೇ ಚಳವಳಿಯ ತಾಯಿಬೇರು ಅಂಬೇಡ್ಕರ್. ಹಾಗಾಗಿ ಅಂಬೇಡ್ಕರ್ ಕೇವಲ ದಲಿತರ ನಾಯಕನಲ್ಲ ಇಡೀ ಸಮಾಜದ ನಾಯಕ ಅವರ ಹಿಂದೂ ಕೋಡ್‌ ಬಿಲ್ ಮೂಲಕ ಮಹಿಳೆಯರಿಗೆ ನ್ಯಾಯ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಕ್ತಿವೇಲು,ಬಡನಿಡಿಯೂರು ಗ್ರಾಮ ಪಂಚಾಯತಿ ಆಧ್ಯಕ್ಷ ಪ್ರಭಾಕರ ತಿಂಗಳಾಯ,ದುರ್ಗಾಪರವೇಶ್ವರಿ ದೇವಸ್ಥಾನದ ಅಧ್ಯಕ್ಷ ಉಮೇಶ್ ಪೂಜಾರಿ, ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಗಿರೀಶ್ ಸಾಲ್ಯಾನ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಮಾಲತಿ, ಸಮಾಜ ಸೇವಕರಾದ ಧನಂಜಯ ಎಸ್ ಮೆಂಡನ್ ಮತ್ತು ರಮೇಶ್ ಪೂಜಾರಿ,

ದಲಿತ ಮುಖಂಡರುಗಳಾದ ವಿಶ್ವನಾಥ ಕದಿಕ್ಕೆ, ಸಂತೋಷ, ಸುಗಂಧಿ,ಸೀನ ಗುರಿಕಾರ,ಕರಿಯ ಗುರಿಕಾರ, ದೇಜು ಗುರಿಕಾರ, ಜಯಕರ ಕದಿಕೆ, ಅನಿಲ್ ಕೋಟ್ಯಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ವಹಿಸಿದ್ದರು.  ಹಿರಿಯ ದಲಿತ ಮುಖಂಡ ದಯಾಕರ್ ಮಲ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸುಷ್ಮಾ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ