ಮಂಗಳೂರು: ದೈವ ನಿಂದನೆಯ ಮತ್ತೊಂದು ವಿಡಿಯೋ ವೈರಲ್! - Mahanayaka
5:20 PM Thursday 16 - October 2025

ಮಂಗಳೂರು: ದೈವ ನಿಂದನೆಯ ಮತ್ತೊಂದು ವಿಡಿಯೋ ವೈರಲ್!

daiva nindane
09/01/2022

ಮಂಗಳೂರು: ಮುಸ್ಲಿಮ್ ವರನೊಬ್ಬ ಕೊರಗಜ್ಜನ ವೇಷ ಧರಿಸಿದ ವಿಚಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರೀ ಚರ್ಚೆಗೊಳಗಾಗುತ್ತಿವೆ. ಈ ಘಟನೆಯನ್ನು ಸ್ವತಃ ಮುಸ್ಲಿಮ್ ಸಂಘಟನೆಗಳು ಖಂಡಿಸಿ, ಯುವಕನಿಗೆ ಬುದ್ಧಿ ಹೇಳುವ ಕೆಲಸ ಮಾಡಿದೆ.


Provided by

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ದೈವಾರಾಧನೆಯನ್ನು ವ್ಯಂಗ್ಯ ಮಾಡಿ, ಅಶ್ಲೀಲ ಮಾತುಗಳನ್ನಾಡುತ್ತಾ ವ್ಯಕ್ತಿಯೊಬ್ಬ ಅವಮಾನ ಮಾಡುತ್ತಿದ್ದು, ಅವನಿಗೆ ಒಂದಿಷ್ಟು ಯುವಕರು ಸಾಥ್ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊರಗಜ್ಜನಿಗೆ ಮಾಡಿರುವ ಅವಮಾನದ ಬಗ್ಗೆ ಸಾಕಷ್ಟು ಚರ್ಚೆಗಳೇ ನಡೆದವು. ಆದರೆ, ಈ ಬಗ್ಗೆ ಯಾಕೆ ಚರ್ಚೆಗಳು ನಡೆಯುತ್ತಿಲ್ಲ? ಯಾಕೆ ಕರಾವಳಿಯ ಸ್ಥಳೀಯ ಸುದ್ದಿ ಮಾಧ್ಯಮಗಳಿಗೆ ಈ ವಿಡಿಯೋ ಸುದ್ದಿಯಾಗಿ ಕಾಣಲಿಲ್ಲ? ಯಾಕೆ ಡಿಬೆಟ್ ಗಳು ನಡೆಯುತ್ತಿಲ್ಲ. ಯಾಕೆ ಹಿಂದೂ ಸಂಘಟನೆಗಳಿಗೆ ಇದೊಂದು ಪ್ರತಿಭಟನಾರ್ಹವಾದ ವಿಚಾರ ಎಂದು ಅನ್ನಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕೊರಗಜ್ಜನಿಗೆ ಅವಮಾನವಾದಾಗ ಸ್ವಾಭಿಮಾನ ಸಿಡಿದೆದ್ದಿತು ಎಂದು ಮುಸ್ಲಿಮ್ ವಧುವಿನ ಮನೆಗೆ ಮುತ್ತಿಗೆ ಹಾಕಲಾಯಿತು. ಮುಸ್ಲಿಮ್ ವರ ವೇಷ ಹಾಕಿ ಕುಣಿದಿದ್ದಾನೆ ಹೌದು. ಆದರೆ, ಇದೀಗ ಚರ್ಚೆಗೀಡಾಗುತ್ತಿರುವ ವಿಡಿಯೋದಲ್ಲಿರುವ ವ್ಯಕ್ತಿ, ತುಳು ಭಾಷೆಯಲ್ಲಿ ದೈವದಂತೆ ಮಾತನಾಡುತ್ತಾ, ತೀರಾ ಕೆಳಮಟ್ಟದ ಭಾಷೆಯಲ್ಲಿ ದೈವವನ್ನು ನಿಂದಿಸುತ್ತಿರುವುದು ಕಂಡು ಬಂದಿದೆ. ಇದೆಲ್ಲ, ಏನು ಎಂದು ಕರಾವಳಿಯ ಜನ ಪ್ರಶ್ನಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ಕೊರಗ ಸಮುದಾಯದ ಕ್ಷಮೆಯಾಚಿಸಿದ ಮುಸ್ಲಿಮ್ ವರ

ನರ್ಸ್ ಗೆಟಪ್ ನಲ್ಲಿ ಬಂದು ಮಗುವನ್ನು ಕದ್ದೊಯ್ದ ಮಹಿಳೆ

31ನೇ ವಯಸ್ಸಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ ನಟಿ: ಅಭಿಮಾನಿಗಳಿಗೆ ಶಾಕ್

ಮಾಜಿ ಸಿಎಂ ಇದ್ದ ವೇದಿಕೆಗೆ ಕೇಸರಿ ಶಾಲು ಧರಿಸಿ, ಚಾಕು ಹಿಡಿದು ನುಗ್ಗಿದ ಮಾನಸಿಕ ಅಸ್ವಸ್ಥ!

ಇತ್ತೀಚಿನ ಸುದ್ದಿ