ಟಿಬೆಟಿಯನ್ ಬೋಧಿಸತ್ವ ಪ್ರತಿಜ್ಞೆ ಸಮಾರಂಭ ನೆರವೇರಿಸಿದ ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ - Mahanayaka

ಟಿಬೆಟಿಯನ್ ಬೋಧಿಸತ್ವ ಪ್ರತಿಜ್ಞೆ ಸಮಾರಂಭ ನೆರವೇರಿಸಿದ ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ

dalai lama
19/03/2022

ಧರ್ಮಶಾಲಾ: ಮುಖ್ಯ ಟಿಬೆಟಿಯನ್ ದೇವಾಲಯವಾದ ತ್ಸುಗ್ಲಾಖಾಂಗ್‌ ನಲ್ಲಿ ಟಿಬೆಟಿಯನ್ ಬೋಧಿಸತ್ವ (ಅಥವಾ ಬೋಧಿಚಿಟ್ಟಾ) ಪ್ರತಿಜ್ಞೆ ಸಮಾರಂಭವನ್ನು ಬೌದ್ಧ ಧರ್ಮ ಗುರು 14ನೇ ದಲೈ ಲಾಮಾ ನೆರವೇರಿಸಿದರು.

ಶುಕ್ರವಾರ ಧರ್ಮಶಾಲಾದಲ್ಲಿ 14ನೇ ದಲೈ ಲಾಮಾ ಅವರು, ತಮ್ಮ ಅನುಯಾಯಿಗಳಿಗೆ ‘ಜಟಕ’ ಕಥೆಗಳ ಕಿರು ಬೋಧನೆಯನ್ನು ಮಾಡಿದರು. ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು .ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗವು ದೇಶವನ್ನು ಅಪ್ಪಳಿಸಿದ ಸುಮಾರು ಎರಡು ವರ್ಷಗಳ ನಂತರ ಬೌದ್ಧ ಧರ್ಮ ಗುರು ದಲೈ ಲಾಮಾ ಮೊದಲ ಬಾರಿಗೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಸಮಾರಂಭದಲ್ಲಿ ಕೇಂದ್ರ ಟಿಬೆಟಿಯನ್ ಆಡಳಿತದ ಸದಸ್ಯರು ಸೇರಿದಂತೆ ಸಾವಿರಾರು ಬೌದ್ಧ ಬಿಕ್ಕುಗಳು ಪಾಲ್ಗೊಂಡರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೈಕ್‌ ಗೆ KSRTC ಬಸ್​ ಡಿಕ್ಕಿ: ಸಹೋದರರಿಬ್ಬರು ಸ್ಥಳದಲ್ಲೇ ಸಾವು

ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ಮಣ್ಣಿನಡಿಯಲ್ಲಿ ಸಿಲುಕಿರುವ ಐವರು ಕಾರ್ಮಿಕರು

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬಸ್ ಮಗುಚಿ ಬಿದ್ದು 6 ಮಂದಿಯ ದಾರುಣ ಸಾವು

ಬಿಸಿಲಿನ ಬೇಗೆಯಲ್ಲಿ ಬಾಯಾರಿಗೆ ನೀಗಿಸಲು ಈ ಜ್ಯೂಸ್ ಉತ್ತಮ

ಇತ್ತೀಚಿನ ಸುದ್ದಿ