ದಲಿತ ವ್ಯಕ್ತಿ ಉತ್ತಮ ಬಟ್ಟೆ, ಸನ್ ಗ್ಲಾಸ್ ಧರಿಸಿದ್ದಕ್ಕೆ ಮೇಲ್ಜಾತಿಯವರಿಂದ ಹಲ್ಲೆ..!

ದಲಿತ ವ್ಯಕ್ತಿಯೊಬ್ಬರು ಉತ್ತಮ ಬಟ್ಟೆ ಮತ್ತು ಸನ್ ಗ್ಲಾಸ್ ಧರಿಸಿದ ಹಿನ್ನೆಲೆಯಲ್ಲಿ ಮೇಲ್ಜಾತಿಯ ತಂಡ ಥಳಿಸಿದ ಘಟನೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಪಾಲನ್‌ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಸಂತ್ರಸ್ತ ಮತ್ತು ಅವರ ತಾಯಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಸಂತ್ರಸ್ತ ಜಿಗರ್ ಶೆಖಾಲಿಯಾ ನೀಡಿದ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ತಾನು ಉತ್ತಮ ವಸ್ತ್ರ ಹಾಗೂ ಕನ್ನಡಕ ಧರಿಸಿದ್ದಕ್ಕಾಗಿ ಅಸಮಾಧಾನಗೊಂಡ ಆರೋಪಿಗಳು ತನಗೆ ಹಾಗೂ ತನ್ನ ತಾಯಿಗೆ ಹೊಡೆದಿದ್ದಾರೆ ಎಂದು ಶೆಖಾಲಿಯಾ ಆರೋಪಿಸಿದ್ದಾರೆ.
ನಾನು ನನ್ನ ಮನೆಯ ಹೊರಗೆ ನಿಂತಿದ್ದಾಗ ಏಳು ಮಂದಿ ಆರೋಪಿಗಳಲ್ಲಿ ಒಬ್ಬಾತ ತನ್ನ ಬಳಿಗೆ ಬಂದು ತನ್ನನ್ನು ನಿಂದಿಸತೊಡಗಿದ. ಇತ್ತೀಚೆಗೆ ನಾನು ತುಂಬಾ ಹಾರಾಡುವುದಾಗಿಯೂ, ನನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ ಎಂದು ದೂರಿನಲ್ಲಿ ಹೇಳಿದ್ದಾರೆ.
ಅಲ್ಲದೇ ಸಂತ್ರಸ್ತನು ಗ್ರಾಮದ ದೇವಸ್ಥಾನದ ಹೊರಗೆ ನಿಂತಿದ್ದಾಗ ರಜಪೂತ ಉಪನಾಮವಿರುವ ಸಮುದಾಯದ ಆರು ಆರೋಪಿಗಳು ಅವರಿಗೆ ಬಂದು, ಸನ್ ಗ್ಲಾಸ್ ಯಾಕೆ ಧರಿಸುತ್ತೀಯಾ..? ಉತ್ತಮ ವಸ್ತ್ರ ಯಾಕೆ ಧರಿಸುತ್ತೀಯಾ..? ಎಂದು ಪ್ರಶ್ನಿಸಿ ಥಳಿಸಿದ್ದಾರೆ. ರಕ್ಷಿಸಲು ತಾಯಿ ಧಾವಿಸಿದಾಗ ಆಕೆಯ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಕೇಸ್ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw