ದಲಿತ ಸಂಘರ್ಷ ಸಮಿತಿವತಿಯಿಂದ ‘ದಲಿತ ಜಾಗೃತಿ’ ಕಾರ್ಯಕರ್ತರ ವಿಚಾರ ಸಂಕಿರಣ

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ತಾಲೂಕು ಸಮಿತಿ, ಮಂಗಳೂರು ಇದರ ವತಿಯಿಂದ ಒಂದು ದಿನದ ‘ದಲಿತ ಜಾಗೃತಿ’ ಎಂಬ ಪರಿಕಲ್ಪನೆ ಯೊಂದಿಗೆ ಕಾರ್ಯಕರ್ತರ ವಿಚಾರ ಸಂಕಿರಣವನ್ನು ಭಾನುವಾರ ಸಾಮ್ರಾಟ್ ಅಶೋಕ್ ಚಕ್ರವರ್ತಿ ಸಭಾಭವನ , ಸಿದ್ಧಾರ್ಥ ನಗರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಖಜಾಂಚಿ ರುಕ್ಕಯ ಅಮಿನ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಸಂ.ಸ. ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ಮಾಡಿದರು. ದ.ಸಂ.ಸ. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ, ಬಂಟ್ವಾಳ , ದ.ಸಂ.ಸ. ಹಿರಿಯ ನಾಯಕ ಮಂಜಪ್ಪ ಪುತ್ರನ್, ತಾಲೂಕು ಮಹಿಳಾ ಸಂಚಾಲಕಿ ಸೀತಾ ಪೇಜಾವರ, ಕರಂಬಾರು ಗ್ರಾಮ ಸಮಿತಿಯ ಸಂಚಾಲಕ ರುಕ್ಕಯ ಕೋಟ್ಯಾನ್, ಎಕ್ಕಾರು ಗ್ರಾಮ ಸಮಿತಿಯ ಹಿರಿಯ ಕಾರ್ಯಕರ್ತರಾದ ಲಕ್ಷ್ಮಿ , ಸಿದ್ದಾರ್ಥ ನಗರ ಗ್ರಾಮ ಸಮಿತಿಯ ಸಂಚಾಲಕರಾದ ಸತೀಶ್ ಸಾಲ್ಯಾನ್ ಇವರುಗಳು ನೆರವೇರಿಸಿದರು.
ಬೇಬಿ, ಶ್ರೀಜಾ ಆರ್.ಎಸ್. ಸಂವಿಧಾನದ ಪೀಠಿಕೆ ವಾಚಿಸಿದರು, ಗಣ್ಯರು ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
‘ದಲಿತ ಜಾಗೃತಿ’ ಎಂಬ ಚಿಂತನ ಕಲ್ಪನೆಯೊಂದಿಗೆ, ಕಾರ್ಯಕರ್ತರ ವಿಚಾರ ಸಂಕೀರ್ಣದ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣಾನಂದ ಡಿ. ಇವರು ವಿಚಾರ ಮಂಡಿಸಿದರು.
ಜೀವನದುದ್ದಕ್ಕೂ ಸಂಘಟನೆಯ ಜೊತೆಗೂಡಿ ದಲಿತ ಕಲಾ ಮಂಡಳಿಯ ಪ್ರಸ್ತುತ ಜಿಲ್ಲಾ ಸಂಚಾಲಕರಾದ ಸಂಕಪ್ಪ ಕಾಂಚನ್ ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ವೇಳೆ ಜಿಲ್ಲಾ ಪದಾಧಿಕಾರಿಗಳಾದ ಗೀತಾ ಕರಂಬಾರು, ಕಮಲಾಕ್ಷ ಬಜಾಲ್, ತಾಲೂಕು ಪದಾಧಿಕಾರಿಗಳಾದ ಕೃಷ್ಣ ಕೆ. ಎಕ್ಕಾರು, ದೊಂಬಯ ಗಿಡಕೆರೆ, ಲಿಂಗಪ್ಪ ಕುಂದರ್, ಪರಮೇಶ್ವರ ಎಕ್ಕಾರು, ಜಯಪ್ರಕಾಶ್ ಪುನರೂರು, ಪುಷ್ಪಾವತಿ ಗಿಡಿಗೆರೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ತಾಲೂಕು ಸಮಿತಿಯ ಅಧಿಕೃತ ಸಭೆ ನಡೆಸುವುದರೊಂದಿಗೆ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಯಿತು.
ಮಂಗಳೂರು ತಾಲೂಕು ನೂತನ ಸಂಚಾಲಕರಾಗಿ ಪುರಂದರ ಕೆರಕಾಡು, ಸಂಘಟನಾ ಸಂಚಾಲಕರಾಗಿ ರುಕ್ಕಯ ಅಮಿನ್ ಕರಂಬಾರು, ದೊಂಬಯ ಗಿಡಿಗೆರೆ, ಕೃಷ್ಣ ಕೆ. ಎಕ್ಕಾರು, ಸುರೇಶ್ ಪೇಜಾವರ, ಹರೀಶ್ ಎಂ.ಬಿ. ಹಾಗೂ ತಾಲೂಕು ಖಜಾಂಚಿ ಕಿರಣ್ ಗುಂಡಾವುಪದವು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೀತಾ ಪೇಜಾವರ, ಗೋಪಾಲ ಬಾರಂಜ, ಶೇಖರ್ ಗುಂಡಾವುಪದವು, ಪರಮೇಶ್ವರ್ ಎಕ್ಕಾರು ಇವರನ್ನು ಆಯ್ಕೆ ಮಾಡಲಾಯಿತು.
ರವಿ ಪಡ್ಪು ಕಾರ್ಯಕ್ರಮ ನಿರೂಪಣೆ ಮಾಡಿದರು. ರಮೇಶ್ ಸುವರ್ಣ ಸ್ವಾಗತಿಸಿ, ನವೀನ್ ಚಂದ್ರ ಕರಂಬಾರು ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth