ದಲಿತ್ ಸೇವಾ ಸಮಿತಿಯ ಉಳ್ಳಾಲ ತಾಲೂಕು ಪದಾಧಿಕಾರಿಗಳು ಆಯ್ಕೆ - Mahanayaka
7:58 PM Thursday 4 - September 2025

ದಲಿತ್ ಸೇವಾ ಸಮಿತಿಯ ಉಳ್ಳಾಲ ತಾಲೂಕು ಪದಾಧಿಕಾರಿಗಳು ಆಯ್ಕೆ

dalitha seva samithi
05/09/2022


Provided by

ಮಂಗಳೂರು: ತಾಲೂಕಿನ ಅಸೈಗೋಳಿಯಲ್ಲಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಉಳ್ಳಾಲ ವಲಯ ಶಾಖೆ ಹಾಗೂ ಪಾಣೆಮಂಗಳೂರು ಹೋಬಳಿ ಶಾಖೆ ಇದರ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಪದಾಧಿಕಾರಿಗಳು ಆಯ್ಕೆ ಮತ್ತು  ಬಹಿರಂಗ ಸಭೆ ಹಾಗೂ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮ ಭಾನುವಾರ ನಡೆಯಿತು.

ಸಭೆಯಲ್ಲಿ ನೂತನ ಅಧ್ಯಕ್ಷರಾಗಿ  ನಾಗೇಶ್ ಟಿ. ಕೈರಂಗಳ, ಪ್ರಧಾನ ಕಾರ್ಯದರ್ಶಿಗಳಾಗಿ ಉಮಾನಾಥ ಪಜೀರು, ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಮಾಡೂರು, ಗೌರವಧ್ಯಕ್ಷರಾಗಿ ನರೇಂದ್ರ ಉಲ್ಲಾಳ ಅವರನ್ನು ಆಯ್ಕೆ ಮಾಡಲಾಯಿತು.

dalitha seva samithi

ಕೋಶಾಧಿಕಾರಿಯಾಗಿ ಅನಂತು, ತಾಲೂಕು ಸಂಘಟನಾ ಕಾರ್ಯದರ್ಶಿ ರೋಹಿತ್ ಉಳ್ಳಾಲ, ಗ್ರಾಮ ಸಂಘಟಕರಾಗಿ ಸೀತಾರಾಮ್ ಕಲ್ಲಾಪು, ಸಂತೋಷ್ ಬೆಳ್ಮೆ, ಚಂದ್ರಹಾಸ ಗುಂಡ್ಯ (ಬೋಳಿಯರು), ತಾರಾನಾಥ್ ಕೊಣಾಜೆ, ರಮಾನಂದ ಮಾಡೂರು, ಬಾಬು ಬಾಳೆಪುಣಿ (ಕುಕ್ಕುದ ಕಟ್ಟೆ ), ಜನಾರ್ದನ ಪಜೀರು, ವಾಸಪ್ಪ ಬಂಗಾರಗುಡ್ಡೆ ( ಬಾಳೆಪುಣಿ) ಅವರನ್ನು ಆಯ್ಕೆ ಮಾಡಲಾಯಿತು.

ಸಂಘಟನೆಯ ಮಹಿಳಾ ಅಧ್ಯಕ್ಷೆಯಾಗಿ ರೇಣುಕಾ, ಉಪಾಧ್ಯಕ್ಷಯಾಗಿ ಬೇಬಿ ಮುಡಿಪು, ಕಾರ್ಯದರ್ಶಿಯಾಗಿ ಕುಮಾರಿ ಪದ್ಮಾವತಿ ಕಾಫಿಕಾಡ್ ಉಲ್ಲಾಳ, ಸಂಚಾಲಕಿಯಾಗಿ ಇಂದಿರಾ ಕೊಣಾಜೆ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು, ಮಂಗಳೂರು ವಿಶ್ವವಿದ್ಯಾನಿಯ ಸಹಾಯಕ ಹಣಕಾಸು ಅಧಿಕಾರಿ ಹೇಮಲತಾ, ಕೆಎಸ್ ಆರ್ ಟಿಸಿ ನೌಕರ ವಾಸಪ್ಪ ಬಂಗಾರಗುಡ್ಡೆ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು. ಉಪಸ್ಥಿತರಿದ್ದರು. ಪ್ರಸಾದ್ ಬೋಲ್ಮಾರ್ ನಿರೂಪಿಸಿದರು. ರೇಣುಕಾ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ