ದನಕಳ್ಳತನದ ಆರೋಪದಡಿಯಲ್ಲಿ ಐವರನ್ನು ಬಂಧಿಸಿದ ಪೊಲೀಸರು - Mahanayaka
4:43 AM Wednesday 28 - January 2026

ದನಕಳ್ಳತನದ ಆರೋಪದಡಿಯಲ್ಲಿ ಐವರನ್ನು ಬಂಧಿಸಿದ ಪೊಲೀಸರು

dana kallathana
17/08/2022

ಮಂಗಳೂರು: ದನ ಕಳ್ಳತನ ಮಾಡಿದ ಆರೋಪದಡಿಯಲ್ಲಿ ಐದು ಮಂದಿಯನ್ನು ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.

ಬಜಾಲ್ ಗ್ರಾಮದ ದೋಟ ಹೌಸ್ ನಿವಾಸಿ ಅಶ್ವಿನ್ ಎಂಬವರ ಕೊಟ್ಟಿಗೆಯಿಂದ ದನವನ್ನು ಕಳವುಗೈದ ಆರೋಪದ ಮೇರೆಗೆ ಐವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಮುಹಮ್ಮದ್ ಅಶ್ಪಕ್ ಯಾನೆ ಶಮೀರ್ ಯಾನೆ ಶಮ್ಮಿ, ಅಝರುದ್ದೀನ್ ಯಾನೆ ಅಝರ್, ಸುಹೈಲ್, ಮುಹಮ್ಮದ್ ಅಫ್ರಿದಿ, ಬಜಾಲ್ ಕಟ್ಟಪುಣಿಯ ಶಾಹಿದ ಯಾನೆ ಚಾಯಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಾರು, ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 20ರಂದು ಸಂಜೆ 6ಕ್ಕೆ ದನವನ್ನು ಕೊಟ್ಟಿಗೆಯನ್ನು ಕಟ್ಟಿಹಾಕಲಾಗಿತ್ತು. ಜುಲೈ 21ರ ಮುಂಜಾವ 3.30ಕ್ಕೆ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ದನ ಕಳವಾಗಿದ್ದನ್ನು ಅರಿತ ಅಶ್ವಿನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ