ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಮೂವರ ಆರೋಪಿಗಳ ಬಂಧನ, 28 ಮಹಿಳೆಯರ ರಕ್ಷಣೆ - Mahanayaka
11:29 PM Wednesday 15 - October 2025

ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಮೂವರ ಆರೋಪಿಗಳ ಬಂಧನ, 28 ಮಹಿಳೆಯರ ರಕ್ಷಣೆ

ccb police
20/02/2022

ಬೆಂಗಳೂರು: ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಡ್ಯಾನ್ಸ್ ಬಾರ್​ನಲ್ಲಿದ್ದ ವಿವಿಧ ರಾಜ್ಯಗಳ 28 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ.


Provided by

ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 6ನೇ ಬ್ಲಾಕ್​ನಲ್ಲಿನ ಕಟ್ಟಡವೊಂದರ 2 ಮತ್ತು 3ನೆಯ ಮಹಡಿಯಲ್ಲಿ ಆರೋಪಿಗಳ ಸಿಕ್ಸ್ ದೇಸಿ ಪಬ್ ಬಾರ್ ಇದೆ. ಆದರೆ ಪಬ್ ಬಾರ್ ಮತ್ತು ರೆಸ್ಟೋರೆಂಟ್‌ ಪರವಾನಿಗೆ ಪಡೆದು ಡ್ಯಾನ್ಸ್ ಬಾರ್‌ ಅಕ್ರಮವಾಗಿ ನಡೆಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರ್‌ ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘಿಸಿ ಡ್ಯಾನ್ಸ್‌ ಬಾರ್ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 28 ಮಹಿಳೆಯರನ್ನು ರಕ್ಷಿಸಿದ್ದಾರೆ.

ಆರೋಪಿಗಳಿ೦ದ 8,900 ರೂ. ನಗದು ಹಾಗೂ 50 ರೂ. ಮುಖ ಬೆಲೆಯ ಕ್ರೇಜಿ ನೈಟ್ ಟೋಕನ್ ಸೇರಿದಂತೆ 2,325 ಟೋಕನ್, ಸೌಂಡ್ ಸಿಸ್ಟಮ್, ಸ್ವೈಪಿಂಗ್ ಮಿಷನ್‌ ವಶಪಡಿಸಿಕೊಂಡು, ಮುಂದಿನ ಕ್ರಮಕ್ಕೆ ಆರೋಪಿಗಳನ್ನು ಕೋರಮಂಗಲ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ. ಈ ಸಂಬಂಧ ಆರೋಪಿಗಳ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾಲದ ಹೊರೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಆಕ್ಸ ಲ್ ತುಂಡಾಗಿ ಹೆದ್ದಾರಿಯಲ್ಲೇ ಕಾರು ಪಲ್ಟಿ: ಮೂವರು ಗಂಭೀರ

ಹಳೆ ದ್ವೇಷದ ಹಿನ್ನೆಲೆ: ಚಿಕ್ಕಮ್ಮನ ಕೊಲೆ ಯತ್ನ | ಆರೋಪಿಗಳ ಬಂಧನ

ಅಪಾಯಕಾರಿ ಬೈಕ್​ ವ್ಹೀಲಿಂಗ್‌ ನಲ್ಲಿ ತೊಡಗಿದ್ದ ಯುವಕನ ಬಂಧನ

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆ ಹೃದಯಾಘಾತದಿಂದ ನಿಧನ!

 

ಇತ್ತೀಚಿನ ಸುದ್ದಿ