ಮೈಸೂರು: ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ! - Mahanayaka

ಮೈಸೂರು: ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ!

kingfisher
18/08/2023


Provided by

ಮೈಸೂರು: ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ 25 ಕೋಟಿ ರೂ. ಮೌಲ್ಯದ ಕಿಂಗ್ ಫಿಷರ್ ಬಿಯರ್ ನ್ನು ಮೈಸೂರಿನ ಅಬಕಾರಿ ಇಲಾಖೆ ಜಪ್ತಿ ಮಾಡಿದೆ.

ವರದಿಗಳ ಪ್ರಕಾರ ಜುಲೈ 15ರಂದು ಬಾಟಲಿಂಗ್ ಆದ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದು ದೃಢವಾಗಿದ್ದು, ಬಿಯರ್ ನಲ್ಲಿರುವ ಸೆಡಿಮೆಂಟ್ ಎಂಬ ಅಂಶ ದೇಹಕ್ಕೆ ಅಪಾಯಕಾರಿ ಎನ್ನುವುದು ಲ್ಯಾಬ್ ನಲ್ಲಿ ದೃಢಪಟ್ಟಿದೆ. ವಿವಿಧ ಕೆಎಸ್ ಬಿಸಿಎಲ್ ಹಾಗೂ ಆರ್ ವಿಬಿ ಸನ್ನದುದಾರರಿಗೆ ಈ ಬಿಯರ್ ಸಾಗಣೆ ಮಾಡಲಾಗಿದೆ. ಈ ಬಿಯರ್ ನ್ನು ಅಂಗಡಿಗಳಿಗೆ ವಿತರಣೆ ಮಾಡದಂತೆ ಸುತ್ತೋಲೆ ನೀಡಲಾಗಿದೆ.

ನಂಜನಗೂಡಿನ ಯುನೈಟೆಡ್ ಬ್ರಿವರಿಸಿಸ್ ಕಂಪೆನಿ ಘಟಕದಲ್ಲಿ ತಯಾರಿಸಿದ ಬಿಯರ್ ಇದಾಗಿದ್ದು, ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಆಲ್ಟ್ರಾ ಲ್ಯಾಗರ್ ಬಿಯರ್ ನಲ್ಲಿ ಸೆಡಿಮೆಂಟ್ ಅಂಶಪತ್ತೆಯಾಗಿದೆ. ಈ ಸ್ಯಾಂಪಲ್ ನ್ನು ಕೆಮಿಕಲ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಆಗಸ್ಟ್ 2ರಂದು ಲ್ಯಾಬ್ ನಿಂದ ಬಂದ ವರದಿಯಲ್ಲಿ ಈ ಬಿಯರ್ ಮಾನವ ಬಳಕೆಗೆ ಯೋಗ್ಯವಲ್ಲ ಎನ್ನುವ ಸಂಗತಿಯನ್ನು ತಿಳಿಸಿದೆ ಎಂದು ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಅಧಿಕೃತ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ