ಪರಪ್ಪನ ಅಗ್ರಹಾರಕ್ಕೆ ಹೋಗುವ ಮುನ್ನ ಅಭಿಮಾನಿಗಳತ್ತ ಕೈಬೀಸಿದ ದರ್ಶನ್

ಬೆಂಗಳೂರು: ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಇಂದು ಪರಪ್ಪನ ಅಗ್ರಹಾರಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.
12 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್ ಅವರನ್ನ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 13 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಗ್ರಹಾರಕ್ಕೆ ಪ್ರಯಾಣ ಮಾಡಲು ಪೊಲೀಸ್ ವ್ಯಾನ್ ಹತ್ತಿದ ನಟ ದರ್ಶನ್ ತಮ್ಮ ಎಂದಿನ ಶೈಲಿಯಂತೆ ಅಭಿಮಾನಿಗಳತ್ತ ಕೈ ಬೀಸಿ ಪ್ಲೈಯಿಂಗ್ ಕಿಸ್ ಕೊಟ್ಟು ಆತಂಕದಲ್ಲಿರುವ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.
ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ನಿಖರ ಮಾಹಿತಿಗಳು ಇನ್ನೂ ದೊರೆತಿಲ್ಲ. ಆದ್ರೆ, ಹಾಗಂತೆ, ಈಗಂತೆ ಎನ್ನುವ ಸುದ್ದಿಗಳೇ ಸತ್ಯ ಎನ್ನುವಂತಾಗಿದೆ. ನ್ಯಾಯಾಂಗ ಬಂಧನದ ಬಳಿಕ ನಟ ದರ್ಶನ್ ಅವರಿಗೆ ಜಾಮೀನು ಸಿಗಬಹುದೇ? ಎನ್ನುವ ನಿರೀಕ್ಷೆಗಳು ಕೂಡ ಹುಟ್ಟಿಕೊಂಡಿವೆ.
ನೆನಪು ಇಟ್ಟುಕೊಳ್ಳಿ ಕುಸಿದು ಬಿದ್ದ ವ್ಯಕ್ತಿ ಇನ್ನೂ ಗಟ್ಟಿಯಾಗುತ್ತಾನೆ ಹೊರತು ಕುಗ್ಗೋ ಮಾತೇ ಇಲ್ಲ ✊⚡@dasadarshan
Boss God Of Fans “ಪುಣ್ಯಾತ್ಮ” 🙏#dboss #haveri #kaatera#DevilTheHero#dbossfans #Bossofsandalwood #dbossfanforever pic.twitter.com/FxIu8FcUMy— D Boss Samrajya Haveri (@ka_27_Gajapade) June 22, 2024
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97